ಇಂದಿನಿಂದ ಕಟ್ಟಾ ವಾರ ಆಚರಣೆ

Published on

ಬೆಟಗೇರಿ: ಗ್ರಾಮದ ಜನ&ಜಾನುವಾರುಗಳಿಗೆ ರೋಗ&ರುಜಿನ ಬಾರದಂತೆ ಹಾಗೂ ಸಕಾಲಕ್ಕೆ ಮಳೆಯಾಗಲೆಂದು ಜು.9, 16, 19, 23, 30ರಂದು ಸಂಪ್ರದಾಯದಂತೆ 5 ದಿನ ವಾರ ಹಿಡಿಯಲಾಗಿದೆ. 9ರಂದು ಬೆಳಗ್ಗೆ 9 ಗಂಟೆಗೆ ಊರಿನ ಪ್ರಮುಖ ಬೀದಿಗಳಲ್ಲಿ ಸಕಲ ವಾದ್ಯಮೇಳಗಳೊಂದಿಗೆ ಪುರ ದೇವರ ಪಲ್ಲಕ್ಕಿ ಉತ್ಸವದ ಮೂಲಕ ಗ್ರಾಮದ ನಾಲ್ಕು ದಿಕ್ಕುಗಳ ಮುಖ್ಯ ರಸ್ತೆಯ ಊರಿನ ಸೀಮೆಗೆ ಕರಿ ಕಟ್ಟುವುದು. ಪುರದೇವರಿಗೆ ಪೂಜೆ, ನೈವೇದ್ಯ ಸಮರ್ಪಣೆ, ದೇವಾಲಯ ಕಟ್ಟೆಗಳಿಗೆ ನೀರು ಹಾಕಲಾಗುತ್ತದೆ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net