ಇಂದಿನಿಂದ ಈಡೇರಲಿದೆ ಮದ್ಯಪ್ರಿಯರ ಮಹದಾಸೆ

h3-Bar
Published on

ಹುಬ್ಬಳ್ಳಿ: ರಾಜ್ಯದಲ್ಲಿ ಅತಿಹೆಚ್ಚು ಮದ್ಯ ಮಾರಾಟವಾಗುವ ನಗರಗಳಲ್ಲಿ ಒಂದಾಗಿರುವ ಹುಬ್ಬಳ್ಳಿ-ಧಾರವಾಡದಲ್ಲಿ ಆಯ್ದ ಮದ್ಯದಂಗಡಿಗಳು ಸೋಮವಾರದಿಂದ ಗ್ರಾಹಕರಿಗೆ ನಿರ್ದಿಷ್ಟ ಸೇವೆಗೆ ಸಿದ್ಧವಾಗಿವೆ. ಆದರೆ, ಸರ್ಕಾರ ವಿಧಿಸಿರುವ ಷರತ್ತುಗಳನ್ನು ಉಲ್ಲಂಘಿಸಿದ ಅಂಗಡಿಗಳಿಗೆ ಯಾವುದೇ ಸಮಯದಲ್ಲಿ ಬೀಗ ಬೀಳಬಹುದಾಗಿದೆ.

ಧಾರವಾಡ ಜಿಲ್ಲೆಯಲ್ಲಿ ವೈನ್​ಶಾಪ್ 98 ಮದ್ಯದಂಗಡಿ ಇದ್ದು, ಇದರಲ್ಲಿ ಸಿಎಲ್2- 73 ಹಾಗೂ ಎಂಎಸ್​ಐಎಲ್​ನ 25 ಅಂಗಡಿಗಳಿವೆ. ಧಾರವಾಡದಲ್ಲಿ 29 ಹಾಗೂ ಹುಬ್ಬಳ್ಳಿ ನಗರದಲ್ಲಿ 38 ಮದ್ಯದ ಅಂಗಡಿ ತೆರೆಯಲು ನಿರ್ಧರಿಸಲಾಗಿದೆ. ಇದರಲ್ಲಿ 30 ವೈನ್​ಶಾಪ್ ಹಾಗೂ 8 ಎಂಎಸ್​ಐಎಲ್ ಮದ್ಯದ ಅಂಗಡಿಗಳಿವೆ.

ಕುಂದಗೋಳ, ಧಾರವಾಡ, ಕಲಘಟಗಿ, ನವಲಗುಂದಗಳಲ್ಲಿ ಯಾವುದೇ ಆತಂಕ ಇಲ್ಲದೇ ತೆರೆಯಬಹುದು. ಆದರೆ, ಹುಬ್ಬಳ್ಳಿಯಲ್ಲಿ ಕಂಟೈನ್​ವೆುಂಟ್ ಜೋನ್ ಇದೆ. ಈ ವಲಯದ ಕೇಂದ್ರ ಸ್ಥಾನದಿಂದ ಒಂದು ಕಿ.ಮೀ. ಸುತ್ತಳತೆಯ ಒಳಗಡೆಯ ವೈನ್​ಶಾಪ್, ಎಂಎಸ್​ಐಎಲ್ ಮಳಿಗೆ ತೆರೆಯಲಾಗುವುದಿಲ್ಲ.

ಈಗಾಗಲೇ ತೆರೆಯಲು ಉದ್ದೇಶಿಸಿರುವ ಮದ್ಯದ ಅಂಗಡಿಗಳ ಮುಂದೆ ಪರಸ್ಪರ ಅಂತರ ಕಾಯ್ದುಕೊಳ್ಳಲು ಸೂಚಿಸಲಾಗಿದೆ. ಅದರನ್ವಯ ಅಲ್ಲಲ್ಲಿ ಬಿಳಿ ಬಣ್ಣದಿಂದ ಚೌಕ ಬರೆಯಲಾಗಿದೆ. ಮದ್ಯ ಪ್ರಿಯರು ಸರತಿ ಸಾಲಿನಲ್ಲಿ ನಿಂತು ಪಡೆಯಲು ಅನುಕೂಲ ಕಲ್ಪಿಸಲಾಗಿದೆ.

42 ದಿನಗಳ ಬಳಿಕ ಅನá-ಮತಿ: ಧಾರವಾಡ: ನಗರದ ಎಂಎಸ್​ಐಎಲ್ ಹಾಗೂ ವೈನ್​ಶಾಪ್​ಗಳ ಎದುರು ಮದ್ಯ ಮಾರಾಟಕ್ಕೆ ಭಾನುವಾರ ಸಿದ್ಧತಾ ಕಾರ್ಯ ನಡೆಯಿತು. 42 ದಿನಗಳ ಬಳಿಕ ಮದ್ಯ ಮಾರಾಟಕ್ಕೆ ಅನುಮತಿ ಸಿಕ್ಕಿರುವುದರಿಂದ ಬಹುತೇಕ ಮದ್ಯಪ್ರಿಯರು ಒಮ್ಮಲೇ ಮಳಿಗೆಗಳಿಗೆ ಲಗ್ಗೆ ಇಡುವ ನಿರೀಕ್ಷೆ ಇದೆ. ಹೀಗಾಗಿ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಅಬಕಾರಿ ಇಲಾಖೆ ಸನ್ನದುದಾರರಿಗೆ ಸೂಚಿಸಿದೆ. ಕೇವಲ ಪಾರ್ಸಲ್ ವ್ಯವಸ್ಥೆಗೆ ಅವಕಾಶವಿದೆ. ಷರತ್ತುಬದ್ಧ ಆದೇಶ ಪಾಲಿಸುವಂತೆ ಸೂಚಿಸಲಾಗಿದ್ದು, ಮಳಿಗೆಗಳ ಮಾಲೀಕರು ಭಾನುವಾರ ಇಡೀ ದಿನ ತಮ್ಮ ಮದ್ಯದಂಗಡಿಗಳ ಮುಂದೆ ಜನದಟ್ಟಣೆ ತಡೆ ಮತ್ತು ಪರಸ್ಪರ ಅಂತರ ನಿರ್ವಹಣೆಯ ಶಿಸ್ತು ಕಾಪಾಡಿಕೊಳ್ಳಲು ಬ್ಯಾರಿಕೇಡ್​ಗಳನ್ನು ಅಳವಡಿಸುತ್ತಿರುವುದು ಕಂಡುಬಂತು. ಸುರಕ್ಷತಾ ಅಂತರದಲ್ಲಿ ಸುಣ್ಣದಿಂದ ಚೌಕಗಳನ್ನು ಗುರುತು ಮಾಡಿದರು. ಮದ್ಯ ಖರೀದಿಗೆ ಹೋಗುವವರಿಗಾಗಿ ಒಳಗೆ ಹಾಗೂ ಹೊರಗೆ ಎಂದು ಪ್ರತ್ಯೇಕ ದಾರಿಗಳನ್ನು ಮಾಡಿರುವುದು ವಿಶೇಷ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net