

ಚಿತ್ರದುರ್ಗ:ಚಿತ್ರದುರ್ಗ ತಾಲೂಕು ಹಿರೇಗುಂಟನೂರಿನಿಂದ ಗುತ್ತಿನಾಡುವರೆಗೆ 11 ಕೆವಿ ಲಿಂಕ್ ಲೈನ್ ಮಾರ್ಗ ಕಾಮಗಾರಿ ಹಿನ್ನೆಲೆಯಲ್ಲಿ ಆ.1ರಿಂದ 8ರವರೆಗೆ ಬೆಳಗ್ಗೆ 11ರಿಂದ ಸಂಜೆ 5ರವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಹಿರೇಗುಂಟನೂರು ಗೊಲ್ಲರಹಟ್ಟಿ,ಚಿಕ್ಕಾ ್ಕಪುರ, ಸೀಬಾರ, ಗುತ್ತಿನಾಡು,ಈಚಲನಾಗೇನಹಳ್ಳಿ,ಹುಣಸೆಕಟ್ಟೆ, ಸಾದರಹಳ್ಳಿ, ಕೆ.ಬಳ್ಳೆಕಟ್ಟೆ ಹಾಗೂ ಬೀರಾವರ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿ ದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.