ಇಂದಿನ ಬದುಕಿಗೆ ಯೋಗ ಅನಿವಾರ್ಯ

Yoga - Copy
Published on

ಬಸವಕಲ್ಯಾಣ: ಇಂದಿನ ಆಧುನಿಕ ಬದುಕಿಗೆ ಯೋಗ ಅತ್ಯಂತ ಅವಶ್ಯಕ ಮತ್ತು ಅನಿವಾರ್ಯ ಎಂದು ಅನುಭವ ಮಂಟಪ ಸಂಚಾಲಕರಾದ ಶ್ರೀ ಶಿವಾನಂದ ಸ್ವಾಮೀಜಿ ಹೇಳಿದರು.

ಶರಣ ಕಮ್ಮಟ ಹಾಗೂ ಅನುಭವ ಮಂಟಪ ಉತ್ಸವ ನಿಮಿತ್ತ 10 ದಿನದ ಯೋಗ ಶಿಬಿರಕ್ಕೆ ಮಂಗಳವಾರ ಚಾಲನೆ ನೀಡಿದ ಅವರು, ನಿತ್ಯ ಯೋಗಾಭ್ಯಾಸ ಮಾಡುವುದರಿಂದ ನಾನಾ ರೀತಿಯ ರೋಗ ಬರದಂತೆ ಆರೋಗ್ಯ ಸಂಪತ್ತು ಸ್ಥಿರವಾಗಿಟ್ಟಿಕೊಳ್ಳಲು ಸಾಧ್ಯ. ಯೋಗ ಶಿವಯೋಗದ ಪಾವನ ಕ್ಷೇತ್ರ ಬಸವಕಲ್ಯಾಣ. ಹೀಗಾಗಿ ಯೋಗದ ಜತೆಗೆ ಬಸವಾದಿ ಶರಣರು ಸಾಸಿ ತೋರಿದ ಶಿವಯೋಗ ದೈಹಿಕ, ಮಾನಸಿಕ ಜತೆಗೆ ಅಧ್ಯಾತ್ಮ ಸಂಪತ್ತು ನಮ್ಮದಾಗಿಸಿಕೊಳ್ಳಬೇಕಾಗಿದೆ ಎಂದರು.

ಭಾಲ್ಕಿ ಹಿರೇಮಠ ಸಂಸ್ಥಾನದ ಪೀಠಾಪತಿ ಶ್ರೀ ಗುರುಬಸವ ಪಟ್ಟದ್ದೇವರು ಮಾತನಾಡಿ, ನ.15ರವರೆಗೆ ನಡೆಯುವ ಯೋಗ ಶಿಬಿರದ ಸುದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.

ಜಿ.ಎಸ್. ಭುರಾಳೆ ಬಸವ ಗುರುಪೂಜೆ ನೆರವೇರಿಸಿದರು. ವೈಜಿನಾಥ ಕಾಮಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸುಭಾಷ ಹೊಳಕುಂದೆ, ಅಶೋಕರಡ್ಡಿ ಲಿಂಗಾವರ, ಶಿವಕುಮಾರ ಬಿರಾದಾರ್, ದಿಲೀಪಕುಮಾರ ಕುಂಬಾರ ಇತರರಿದ್ದರು. ಅಮರೇಶ ಸ್ವಾಮಿ ಸ್ವಾಗತಿಸಿದರು. ಅನೀಲಕುಮಾರ ಸೂಗಿ ನಿರೂಪಣೆ ಮಾಡಿದರು. ರಾಜಕುಮಾರ ಅಲಶೆಟ್ಟೆ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net