ಕೊಳ್ಳೇಗಾಲ: ಇಂದಿನ ಜೀವನ ಶೈಲಿಯೇ ಮಹಿಳೆಯರ ಅನಾರೋಗ್ಯಕ್ಕೆ ಪ್ರಮುಖ ಕಾರಣ ಎಂದು ಬೆಂಗಳೂರು ಆಲ್ಟಿಯಸ್ ಆಸ್ಪತ್ರೆಯ ವೈದ್ಯ ಡಾ.ಶಿಜು ಅಭಿಪ್ರಾಯಪಟ್ಟರು.
ಪಟ್ಟಣದ ರೋಟರಿ ಭವನ ಸಭಾಂಗಣದಲ್ಲಿ ಭಾನುವಾರ ರೋಟರಿ ಸಂಸ್ಥೆ ಮತ್ತು ಬೆಂಗಳೂರು ಆಲ್ಟಿಯಸ್ ಆಸ್ಪತ್ರೆ ಸಹಯೋಗದಲ್ಲಿ ಆಯೋಜಿಸಿದ್ದ ಸ್ತ್ರೀರೋಗ, ಗರ್ಭಕೋಶ ಕಾಯಿಲೆಗಳು, ಬಂಜೆತನ ಸಮಸ್ಯೆ, ಸ್ಕಾೃನಿಂಗ್ ಮತ್ತು ಶಸ್ತ್ರ ಚಿಕಿತ್ಸಾ ಸೇವಾ ಉಚಿತ ತಪಾಸಣೆ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
ದೊಡ್ಡ ಸಮಸ್ಯೆಗಳು ಏನೇ ಇದ್ದರೂ ಪ್ರಾರಂಭದಲ್ಲಿಯೇ ತಪಾಸಣೆ ಮಾಡಿಸಿಕೊಳ್ಳುವ ಮೂಲಕ ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದು ಸಲಹೆ ನೀಡಿದರು. ರೋಟರಿ ಅಧ್ಯಕ್ಷ ಮಹಾದೇವ ಮಾತನಾಡಿ, ಗ್ರಾಮೀಣ ಮಹಿಳೆಯರಿಗೆ ಉತ್ತಮ ಆರೋಗ್ಯ ದೊರಕಿಸುವ ಹಿನ್ನೆಲೆಯಲ್ಲಿ ಸಮಾಜ ಸೇವೆಯ ಕಾಳಜಿವುಳ್ಳ ಕಾರ್ಯವನ್ನು ಬೆಂಗಳೂರು ಆಲ್ಟಿಯಸ್ ಆಸ್ಪತ್ರೆ ಮಾಡುತ್ತಿದೆ. ಮಹಿಳೆಯರು ಈ ಶಿಬಿರವನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದರು.
ಶಿಬಿರದಲ್ಲಿ 125 ಮಹಿಳೆಯರು ಗರ್ಭಕೋಶ ಮತ್ತು ಸ್ತ್ರೀರೋಗ ತಪಾಸಣೆಗೆ ಒಳಪಟ್ಟರು. ಸ್ಕಾೃನಿಂಗ್‌ಗೆ 85 ಜನರು ಒಳಪಟ್ಟು ಅದರಲ್ಲಿ 25 ಜನರಿಗೆ ಉಚಿತವಾಗಿ ಶಸ್ತ್ರ ಚಿಕಿತ್ಸೆಗೆ ಆಯ್ಕೆ ಮಾಡಲಾಯಿತು. ಹಿರಿಯ ರೋಟರಿ ಸದಸ್ಯ ಡಿ.ವೆಂಕಟಾಚಲ, ರೋಟರಿ ಕಾರ್ಯದರ್ಶಿ ಬಿ.ಕೆ.ಪ್ರಕಾಶ್, ಸಹಾಯಕ ಪ್ರಾಂತಪಾಲ ಬಸವರಾಜು, ಸರಸ್ವತಿ ಹೊನ್ನಪ್ಪ, ದೊರೆಸ್ವಾಮಿ, ಆಲ್ಟಿಯಸ್ ಆಸ್ಪತ್ರೆ ಡಾ. ಬಿಂದು, ಡಾ.ಲವ್ಲಿನ್, ಡಾ. ಶ್ರೀಷಾ, ಡಾ.ದಿವ್ಯಾ, ಪಿಆರ್‌ಒ ಕಿರಣ್, ಅನಂತ್, ಆಲ್ಟಿಯಸ್ ಆಸ್ಪತ್ರೆಯ ಮುಖ್ಯಸ್ಥ ಶ್ರೀಜು ಮತ್ತು ಸಿಬ್ಬಂದಿ ಇದ್ದರು.