ಇಂದಿಗೂ ನಿರ್ಮೂಲನೆಯಾಗಿಲ್ಲ ಜಾತಿಯತೆ

ctd....3
Published on

ಚಿತ್ರದುರ್ಗ: ಭಾರತದ ಹಿರಿಮೆ, ಗರಿಮೆಯನ್ನು ಹೊರ ದೇಶಗಳಲ್ಲಿ ಹೇಳಿದ ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರೆಂದರೆ ಎಲ್ಲರಲ್ಲೂ ಒಂದು ರೀತಿಯ ಹುರುಪು, ಹುಮ್ಮಸ್ಸು ಸಂಚಲನವಾಗುತ್ತದೆ ಎಂದು ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಕೃಷ್ಣ ಶ್ರೀಪಾದ ದೀಕ್ಷಿತ್ ಹೇಳಿದರು.

ವರ್ತಮಾನದ ಸನ್ನಿವೇಶದಲ್ಲಿ ಯುವಕರ ಬಗೆಗಿನ ಸ್ವಾಮಿ ವಿವೇಕಾನಂದರ ಚಿಂತನೆಗಳ ಪ್ರಸ್ತುತತೆ ಬಗ್ಗೆ ಸರಸ್ವತಿ ಕಾನೂನು ಕಾಲೇಜಿನಲ್ಲಿ ಎರಡು ದಿನಗಳ ಕಾಲ ಹಮ್ಮಿಕೊಂಡಿದ್ದ ರಾಷ್ಟ್ರೀಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ವಿವೇಕಾನಂದರು ಭಾರತದ ಬಗ್ಗೆ ಬೇರೆ ದೇಶಗಳಲ್ಲಿದ್ದ ತಪ್ಪು ಕಲ್ಪನೆ ಹೋಗಲಾಡಿಸಿದರು ಎಂದರು.

ಜಾತಿಯತೆ ನಿರ್ಮೂಲನೆಯಾಗದ ಹೊರತು ಭಾರತದ ಉದ್ಧಾರ ಸಾಧ್ಯವಿಲ್ಲ ಎಂದಿದ್ದ ವಿವೇಕಾನಂದರ ಮಾತನ್ನು ಸ್ಮರಿಸಿದ ನ್ಯಾಯ ಮೂರ್ತಿ, ರಾಮಾಯಣ, ಮಹಾಭಾರತ ಹಾಗೂ ಸಂವಿಧಾನವನ್ನು ಕೊಡುಗೆಯಾಗಿ ಕೊಟ್ಟವರು ಮೇಲ್ಜಾತಿಯವರಲ್ಲ ಎನ್ನುವ ಜಾಗೃತಿ ಎಲ್ಲರಲ್ಲಿಯೂ ಇರಬೇಕು ಎಂದರು.

ದೇಶಕ್ಕೆ ಸಂವಿಧಾನ ಕೊಡುಗೆಯಾಗಿ ಕೊಟ್ಟಿರುವ ಡಾ.ಬಿ.ಆರ್. ಅಂಬೇಡ್ಕರ್ ಅವರಲ್ಲಿ ಜಾತಿ ನಿರ್ಮೂಲನೆ ಉದ್ದೇಶವಿತ್ತು. ಆದರೆ, ಇಂದಿಗೂ ಜಾತಿ ತಾರತಮ್ಯ ನಿವಾರಣೆಯಾಗಿಲ್ಲ ಎಂದು ವಿಷಾದಿಸಿದರು.

ರಾಜ್ಯ ಕಾನೂನು ವಿಶ್ವವಿದ್ಯಾನಿಲಯದ ಉಪ ಕುಲಪತಿ ಪ್ರೊ.ಸಿ. ಬಸವರಾಜು, ನಿವೃತ್ತ ನ್ಯಾಯಮೂರ್ತಿ ಎಚ್. ಬಿಲ್ಲಪ್ಪ, ರಾಜ್ಯ ಎನ್ ಎಸ್‌ಎಸ್ ಅಧಿಕಾರಿ ಪ್ರತಾಪ್‌ಲಿಂಗಯ್ಯ, ಸರಸ್ವತಿ ಕಾನೂನು ಕಾಲೇಜು ಅಧ್ಯಕ್ಷ ಎಚ್. ಹನುಮಂತಪ್ಪ, ಉಪಾಧ್ಯಕ್ಷ ಫಾತ್ಯರಾಜನ್, ಡಿ.ಕೆ. ಶೀಲಾ, ಎನ್‌ಎಸ್‌ಎಸ್ ಕೋ-ಆರ್ಡಿನೇಟರ್ ಐ.ಬಿ. ಬೀರಾದರ್, ಪ್ರಾಚಾರ್ಯ ಡಾ.ಎಂ.ಎಸ್.ಸುಧಾದೇವಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net