ಇಂಡಿಯಾನ ಆಸ್ಪತ್ರೆಯಿಂದ ಚಾಲಕರಿಗೆ ಹೃದಯ ತಪಾಸಣೆ

02_HSN_02
Published on

ಹಾಸನ: ನಗರ ಇಂಡಿಯಾನ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಹಾರ್ಟ್ ಸೆಂಟರ್ ಹಾಸನ ಮತ್ತು ಬಿಎಂಎಸ್ ಆಟೋ ಚಾಲಕರ ಸಂಘ ಹಾಸನ ಇವರ ಸಹಯೋಗದಲ್ಲಿ ಶ್ರೀ ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮಿಯವರ 118 ನೇ ಜನ್ಮದಿನವನ್ನು ಮಂಗಳವಾರ ಅದ್ದೂರಿಯಾಗಿ ಆಚರಿಸಲಾಯಿತು.

ಇಂಡಿಯಾನ ಆಸ್ಪತ್ರೆಯ ಹೃದ್ರೋಗ ತಜ್ಞ ಡಾ. ಅನೂಪ್ ಕಾರ್ಯಕ್ರಮ ಉದ್ಗಾಟಿಸಿ ಮಾತನಾಡಿದ ಅವರು, ಚಾಲಕರಲ್ಲಿ ಒತ್ತಡ ಮತ್ತು ಆಯಾಸ ಜಾಸ್ತಿ ಇದ್ದು, ಹೃದಯ ಒತ್ತಡಕ್ಕೆ ಒಳಗಾಗಿ ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚಾಗುತ್ತಿದೆ. ಹೃದಯದ ಮೇಲಿನ ಒತ್ತಡವನ್ನು ಕಡಿಮೆ ಮಾಡಿ, ಹೃದಯ ತಪಾಸಣೆ ಸಹಕಾರಿಯಾಗಲಿದೆ. ನಗರದ ಚಾಲಕರಿಗಾಗಿ 6,000 ರೂ.ಗಳ ಹೃದಯ ತಪಾಸಣೆಯನ್ನು ಕೇವಲ 1,499 ರೂ.ಗೆ ಮಾತ್ರ ನೀಡುತ್ತೇವೆ ಎಂದು ಹೇಳಿ ಇಂಡಿಯಾನ ಚಾಲಕರ ಹೃದಯ ತಪಾಸಣೆ ಎಂಬ ಕೂಪನ್ ಅನ್ನು ಚಾಲಕರಿಗೆ ವಿತರಿಸಿದರು.

ಡಾ॥ ವಿಶ್ವಾಸ್ ಅವರು ಕಾರ್ಯಕ್ರಮಕ್ಕೆ ಬಂದಂತಹ ರೋಗಿಗಳ ಬಿಪಿ, ಸಕ್ಕರೆ ಪರೀಕ್ಷಿಸಿ ಉತ್ತಮ ವೈದ್ಯಕೀಯ ಸಲಹೆ ನೀಡಿದರು. ಈ ಕಾರ್ಯಕ್ರಮದಲ್ಲಿ ಆಟೋ ಚಾಲಕ ಸಂಘದ ಅಧ್ಯಕ್ಷರಾದ ಜಾನ್, ರಾಜ್ಯ ಉಪಾಧ್ಯಕ್ಷ ಎಚ್.ಕೆ. ದಿಲೀಪ್, ಕಟ್ಟಾಯ ಶಿವಕುಮಾರ್, ಮೋಹನ್, ರಾಜೇಗೌಡ, ಆನಂದ್, ನಾಗರಾಜು ಹಾಗೂ ಇಂಡಿಯಾನ ಆಸ್ಪತ್ರೆಯ ಸಿಬ್ಬಂದಿ ರಂಗಸ್ವಾಮಿ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net