

ಚಿತ್ರದುರ್ಗ: ನಗರದ ಇಂಡಿಯನ್ ಇಂಟರ್ ನ್ಯಾಷನಲ್ ಸಿಬಿಎಸ್‌ಇ ಸ್ಕೂಲ್‌ನ ವಿದ್ಯಾರ್ಥಿಗಳು ವೈದ್ಯಕೀಯ ಕೋರ್ಸ್ ಆಯ್ಕೆಗಾಗಿ ನಡೆದ 2024ರ ನೀಟ್ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆಗೈದಿದ್ದಾರೆ.
ವಿದ್ಯಾರ್ಥಿ ದೈವಿಕ್ ಡಿ ಕುಮಾರ್ 584 ಅಂಕಗಳೊಂದಿಗೆ ರಾಷ್ಟ್ರಮಟ್ಟದಲ್ಲಿ ಉತ್ತಮ ಫಲಿತಾಂಶ ದಾಖಲಿಸಿದ್ದಾನೆ. ಸ್ಕೂಲ್ ಹಾಗೂ ಎಸ್‌ಎಲ್‌ವಿ ಪಿಯು ಕಾಲೇಜಿನ ಒಟ್ಟು 64 ವಿದ್ಯಾರ್ಥಿಗಳು ವೈದ್ಯಕೀಯ ಕೋರ್ಸ್‌ಗೆ ಅರ್ಹತೆ ಪಡೆದಿದ್ದಾರೆ.
ಎಂ.ವಿ.ಮಾನಸ, ಕೆ.ಸ್ನೇಹಾ, ಕುಲದೀಪ್‌ಸಿಂಗ್, ಕೆ.ಪವನ್, ಶ್ರೀರಕ್ಷಾ, ಲಿಖಿತ್, ತ್ರಿಪುರಾಂಭ ಇನ್ನಿತರೆ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆದಿದ್ದಾರೆ.
ಕಾಲೇಜಿನಲ್ಲಿ ಅನುಭವಿ ಉಪನ್ಯಾಸಕರಿಂದ ಸ್ಪರ್ಧಾತ್ಮಕ ಪರೀಕ್ಷೆ ಸಂಬಂಧ ನಡೆಸಲಾಗುವ ವಿಶೇಷ ತರಗತಿಗಳಿಂದ, ಸೂಕ್ತ ಮಾರ್ಗದರ್ಶನದಿಂದ ನೀಟ್ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆಯಲು ಸಾಧ್ಯವಾಯಿತು ಎಂದು ವಿದ್ಯಾರ್ಥಿ ದೈವಿಕ್ ಡಿ ಕುಮಾರ್, ವಿದ್ಯಾರ್ಥಿನಿಯರು ತಿಳಿಸಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ದೇವರಾಜ್ ಅರಸ್ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಎಚ್.ಚಂದ್ರಕಲಾ, ಸಿಇಒ ಎಂ.ಸಿ.ರಘುಚಂದನ್, ಶಾಲೆಯ ಪ್ರಾಚಾರ್ಯ ಆಂಟೋನಿ ಮ್ಯಥ್ಯೂ, ಸಂಯೋಜಕ ಕೆ.ಟಿ.ಕೋಟ್ರೇಶ್, ಎಸ್‌ಎಲ್‌ವಿ ಪಿಯು ಕಾಲೇಜಿನ ಪ್ರಾಚಾರ್ಯ ಯು.ಕೇಶವಮೂರ್ತಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.