ಇಂಡಿ ಪಟ್ಟಣದ ವಾಣಿಜ್ಯ ಮಳಿಗೆ ಬಹಿರಂಗ ಹರಾಜು

MLA, Yashwantaraya Gowda Patil, Public Meeting, Commercial Store, Open Auction, Indi,
ಇಂಡಿ ಪಟ್ಟಣದಲ್ಲಿ ನಿರ್ಮಿಸಿರುವ ಮೆಗಾ ಮಾರುಕಟ್ಟೆಯ ಸಭಾಂಗಣದಲ್ಲಿ ಏರ್ಪಡಿಸಿದ್ದ ಸಾರ್ವಜನಿಕ ಸಭೆಯಲ್ಲಿ ಶಾಸಕ ಯಶವಂತರಾಯಗೌಡ ಪಾಟೀಲ ಮಾತನಾಡಿದರು. ಎಸಿ ಅಬೀದ್ ಗದ್ಯಾಳ, ತಹಸೀಲ್ದಾರ್ ಬಿ.ಎಸ್. ಕಡಕಬಾವಿ, ಅನೀಲಗೌಡ ಬಿರಾದಾರ, ದೇವೇಂದ್ರ ಕಂಬಾರ, ಪ್ರಶಾಂತ ಕಾಳೆ, ಜಗದೀಶ ಕ್ಷತ್ರಿ ಇತರರಿದ್ದರು.
Published on

ಇಂಡಿ: ಪಟ್ಟಣದ ಮಧ್ಯ ಭಾಗದಲ್ಲಿ ಪಾಳು ಬಿದ್ದಿದ್ದ ಜಾಗವನ್ನು ಗುರುತಿಸಿ, ಸದುಪಯೋಗ ಮಾಡಿಕೊಂಡು 30 ಕೋಟಿ ರೂ.ಗಳ ವೆಚ್ಚದಲ್ಲಿ 246 ವ್ಯಾಪಾರಿ ಮಳಿಗೆಗಳುಳ್ಳ ಮೆಗಾ ಮಾರುಕಟ್ಟೆ ನಿರ್ಮಿಸಿದ್ದು, ಅವುಗಳಲ್ಲಿ ಈಗಾಗಲೇ 100 ಮಳಿಗೆಗಳು ವ್ಯಾಪಾರಕ್ಕೆ ಸಿದ್ದವಾಗಿವೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.

ಪಟ್ಟಣದ ಮೆಗಾ ಮಾರುಕಟ್ಟೆಯ ಆವರಣದಲ್ಲಿ ಗುರುವಾರ ಏರ್ಪಡಿಸಿದ್ದ ಸಾರ್ವಜನಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಮಳಿಗೆಗಳನ್ನು ಬಹಿರಂಗ ಹರಾಜು ಮಾಡಿ ಪುರಸಭೆಗೆ ಆದಾಯ ಮಾಡಿಕೊಡಬೇಕೆಂದು ಹರಾಜು ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಅದಕ್ಕೆ ಪುರಸಭೆಯ ಸದಸ್ಯರು, ಸಾರ್ವಜನಿಕರು ಸಹಕಾರ ನೀಡಬೇಕು ಎಂದರು.

ಮೆಗಾ ಮಾರುಕಟ್ಟೆಗೆ ಶಾಸಕರ ಅನುದಾನದಲ್ಲಿ 8 ಕೋಟಿ ರೂ. ನೀಡಲಾಗಿದೆ. ಇನ್ನುಳಿದ ಹಣವನ್ನು ಸರ್ಕಾರದ ವಿವಿಧ ಸಂಸ್ಥೆಗಳಿಂದ ಸಾಲ ಪಡೆದುಕೊಳ್ಳಲಾಗಿದೆ. ಆ ಸಾಲವನ್ನು ಪುರಸಭೆ ಸಕಾಲದಲ್ಲಿ ತೀರಿಸುವ ಉದ್ದೇಶದಿಂದ ಸರ್ಕಾರಿ ನಿಯಮಾನುಸಾರ ಸಿದ್ಧಗೊಂಡಿರುವ ಮೆಗಾ ಮಾರುಕಟ್ಟೆಯ ಮಳಿಗೆಗಳನ್ನು ಹರಾಜು ಮಾಡಲಾಗುತ್ತಿದೆ. ಇದರಲ್ಲಿ ಯಾವುದೇ ದುರುದ್ದೇಶವಿಲ್ಲ ಎಂದರು.

ಪುರಸಭೆ ಸದಸ್ಯ ಅನೀಲಗೌಡ ಬಿರಾದಾರ ಮಾತನಾಡಿ, ಜ. 22ಮತ್ತು 23ರಂದು ನಡೆಯುವ ಮೆಗಾ ಮಾರುಕಟ್ಟೆಯ ಮಳಿಗೆಗಳ ಹರಾಜಿಗೆ ಗ್ರೀನ್ ಸಿಗ್ನಲ್ ನೀಡಿದರು.

ಪುರಸಭೆ ಮಾಜಿ ಅಧ್ಯಕ್ಷ ದೇವೇಂದ್ರ ಕುಂಬಾರ, ದಲಿತ ಸಮುದಾಯದ ಮುಖಂಡ ಪ್ರಶಾಂತ ಕಾಳೆ, ರಾಜಕೀಯ ಮುಖಂಡರಾದ ಜಗದೀಶ ಕ್ಷತ್ರಿ, ಜಟ್ಟೆಪ್ಪ ರವಳಿ ಹಾಗೂ ಇತರ ಸದಸ್ಯರು ಮಾತನಾಡಿದರು.

ಎಸಿ ಅಬೀದ್ ಗದ್ಯಾಳ ಮಾತನಾಡಿ, ಜ. 22ಮತ್ತು 23ರಂದು ಜಿಲ್ಲಾಧಿಕಾರಿಗಳ ಮಾರ್ಗಸೂಚಿಯಂತೆ ಮೆಗಾ ಮಾರುಕಟ್ಟೆಯ 100 ಮಳಿಗೆಗಳನ್ನು ಬಹಿರಂಗ ಹರಾಜು ಮಾಡಲಾಗುತ್ತಿದೆ. ಪುರಸಭೆ ಸದಸ್ಯರು, ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು. ತಹಸೀಲ್ದಾರ್ ಬಿ.ಎಸ್. ಕಡಕಬಾವಿ, ಪುರಸಭೆ ಸದಸ್ಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net