ಇಂಡಿ ತಾಲೂಕು ಶೈಕ್ಷಣಿಕ ವಿದ್ಯಾಕಾಶಿಯಾಗಿದೆ

Indi Taluk is an educational institution
ಇಂಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಂತಿಮ ವರ್ಷದ ಬಿಎ ಬಿಕಾಂ ವಿದ್ಯಾರ್ಥಿಗಳ ಬಿಳ್ಕೋಡುವ ಸಮಾರಂಭದಲ್ಲಿ ಶಾಸಕ ಯಶವಂತರಾಯಗೌಡ ಪಾಟೀಲ ಉದ್ಘಾಟಿಸಿದರು. ಎಸಿ ಅಬೀದ್ ಗದ್ಯಾಳ, ಗೌಡಪ್ಪ ಬಿರಾದಾರ, ಆರ್.ಎಚ್. ರಮೇಶ, ತಿಪ್ಪಣ್ಣ ವಾಗ್ದಾಳ ಇತರರಿದ್ದರು.
Published on

ಇಂಡಿ: ಸಂಗನಬಸವ ಶ್ರೀಗಳು ಜಿಲ್ಲೆಯಲ್ಲಿ ಶೈಕ್ಷಣಿಕ ಕ್ರಾಂತಿ ಮಾಡಿದ್ದರೆ ತಾಲೂಕಿಗೆ ಸರ್ಕಾರದಿಂದ ಶೈಕ್ಷಣಿಕ ಸೌಲಭ್ಯಗಳನ್ನು ಪಡೆದು ವಿದ್ಯಾಕಾಶಿ ಮಾಡಲಾಗಿದೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಸಕ್ತ ಸಾಲಿನ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಸಮಾರೋಪ ಸಮಾರಂಭ ಹಾಗೂ ಅಂತಿಮ ವರ್ಷದ ಬಿಎ, ಬಿಕಾಂ ವಿದ್ಯಾರ್ಥಿಗಳ ಬಿಳ್ಕೋಡುವ ಸಮಾರಂಭದಲ್ಲಿ ಅವರು ಮಾತನಾಡಿದರು.

ಬಡವರ, ದೀನ ದಲಿತರ, ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂದು ತಾಲೂಕಿನಲ್ಲಿ ಶಿಕ್ಷಣ ಇಲಾಖೆಯ ಕಾಲೇಜುಗಳು, ಶಾಲಾ ಕಟ್ಟಡಗಳು, ಹಾಸ್ಟೇಲ್‌ಗಳು ಸೇರಿದಂತೆ ಶೈಕ್ಷಣಿಕ ಅಭಿವೃದ್ಧಿಯ ಪರ್ವ ಮಾಡಲಾಗಿದೆ. ಇಂಡಿ ಮತ್ತು ಝಳಕಿಯಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸರ್ಕಾರಿ ಪದವಿಪೂರ್ವ ಕಾಲೇಜು, ಇಂಡಿಯಲ್ಲಿ ಸರ್ಕಾರಿ ಐಟಿಐ, ಝಳಕಿಯಲ್ಲಿ ಸರ್ಕಾರಿ ಪಾಲಿಟೆಕ್ನಿಕ್ ಸೇರಿದಂತೆ ಗ್ರಾಮಗಳಲ್ಲಿ ವಸತಿ ನಿಲಯಗಳು ಮತ್ತು ಶಾಲಾ ಕಟ್ಟಡಗಳನ್ನು ಮಕ್ಕಳಿಗೆ ಓದಲು ಅಭಿವೃದ್ಧಿ ಪೂರಕ ವಾತಾವರಣ ಮಾಡಲಾಗಿದೆ ಎಂದರು.

ಉಪವಿಭಾಗಾಧಿಕಾರಿ ಅಬೀದ್ ಗದ್ಯಾಳ ಮಾತನಾಡಿ, ವಿದ್ಯಾರ್ಥಿಗಳು ಜೀವನದಲ್ಲಿ ನೈತಿಕತೆ ಅಳವಡಿಸಿಕೊಳ್ಳಬೇಕು. ಜಗತ್ತಿನಲ್ಲಿ ಅತ್ಯಂತ ಬಲಿಷ್ಠ ಮತ್ತು ಶ್ರೀಮಂತ ರಾಷ್ಟ್ರ ನಿರ್ಮಾಣದಲ್ಲಿ ಶಿಕ್ಷಣದ ಪಾತ್ರ ಮಹತ್ವದ್ದು, ವಿದ್ಯಾರ್ಥಿಗಳು ಶ್ರೇಷ್ಠ ಶಿಕ್ಷಣವಂತರಾಗಿ ಶಾಲೆಯ ಕೀರ್ತಿ ಹೆಚ್ಚಿಸಿ ಎಂದರು.

ಕಾಲೇಜಿನ ಹಳೆಯ ವಿದ್ಯಾರ್ಥಿ ಬೆಂಗಳೂರಿನ ಸಿಐಡಿ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿರುವ ಗೌಡಪ್ಪ ಬಿರಾದಾರ ಮಾತನಾಡಿ, ವಿದ್ಯಾರ್ಥಿಗಳು ಸ್ಫರ್ಧಾ ಮನೋಭಾವ ಬೆಳೆಸಿಕೊಂಡು ಜೀವನ ಮಟ್ಟ ರೂಪಿಸಿಕೊಳ್ಳಲು ಕೇಳಿಕೊಂಡರು.

ಪ್ರಾಚಾರ್ಯ ಆರ್.ಎಚ್. ರಮೇಶ, ತಿಪ್ಪಣ್ಣ ವಾಗ್ದಾಳ, ಡಾ. ಶಿರೀನು ಸುಲ್ತಾನಾ ಇನಾಮದಾರ, ರಾಜಲಕ್ಷ್ಮಿ, ಶಿವಯೋಗಪ್ಪ ಮಾಡ್ಯಾಳ ಮಾತನಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net