ಇಂಡಿ ಗ್ರಾಮೀಣ ಪೊಲೀಸ್ ಠಾಣೆ ಮೇಲ್ದರ್ಜೆಗೇರಿಸಿ; ಮಾಜಿ ಶಾಸಕ ಸಾರ್ವಭೌಮ ಬಗಲಿ ಆಗ್ರಹ

IMG-20210307-WA0135
Published on

ವಿಜಯಪುರ: ಇಂಡಿ ಶಹರ ಪೊಲೀಸ್ ಠಾಣೆ ಮೇಲ್ದೆರ್ಜೆಗೇರಿಸುವ ಬದಲು ಗ್ರಾಮೀಣ ಠಾಣೆಯನ್ನು ಮೇಲ್ದರ್ಜೆಗೇರಿಸಿ ಎಂದು ಮಾಜಿ ಶಾಸಕ ಡಾ.ಸಾರ್ವಭೌಮ ಬಗಲಿ ಆಗ್ರಹಿಸಿದ್ದಾರೆ.

ಭೀಮಾತೀರ ಖ್ಯಾತಿಯ ಇಂಡಿ ಭಾಗದಲ್ಲಿ ಹೆಚ್ಚಾಗಿ ಅಪರಾಧ ಕೃತ್ಯಗಳು ನಡೆಯುತ್ತಿವೆ. ಗ್ರಾಮೀಣ ಪ್ರದೇಶಕ್ಕೆ ಹೋಲಿಸಿದರೆ ನಗರದಲ್ಲಿ ಅಪರಾಧ ಪ್ರಕರಣಗಳ ಸಂಖ್ಯೆ ತೀರ ಕಡಿಮೆ. ಹೀಗಾಗಿ ಶಾಸಕರು ಮತ್ತು ಪೊಲೀಸ್ ಇಲಾಖೆ ನಗರ ಠಾಣೆಯನ್ನು ಮೇಲ್ದರ್ಜೆಗೇರಿಸುವುದನ್ನು ಬಿಟ್ಟು ಗ್ರಾಮೀಣ ಠಾಣೆಯನ್ನು ಮೇಲ್ದೆರ್ಜೆಗೇರಿಸಲಿ ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಗ್ರಾಮೀಣ ಭಾಗದಲ್ಲಿ ವಿಶೇಷವಾಗಿ ಭೀಮಾತೀರದಲ್ಲಿ ಕ್ರಿಮಿನಲ್ ಅಪರಾಧ ಪ್ರಕರಣಗಳು ಹಾಗೂ ಕಂಟ್ರಿ ಪಿಸ್ತೂಲ್ ಹಾವಳಿ ಹೆಚ್ಚಿದೆ. ಹೀಗಾಗಿ ಗ್ರಾಮೀಣ ಭಾಗದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಗ್ರಾಮೀಣ ಠಾಣೆ ಮೇಲ್ದರ್ಜೆಗೇರಿಸಲಿ ಅದನ್ನು ಬಿಟ್ಟು ನಗರ ಠಾಣೆ ಮೇಲ್ದೆರ್ಜೆಗೇರಿಸಿದ್ದು ಹಾಸ್ಯಾಸ್ಪದ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net