

ಚಿತ್ರದುರ್ಗ: ಎಸ್‌ಆರ್‌ಎಸ್ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಸಾಂಸ್ಕೃತಿಕ ಕಾರ್ಯಕ್ರಮ ಸಮಿತಿ, ಎನ್‌ಎಸ್‌ಎಸ್, ಕ್ರೀಡಾ ಮತ್ತು ರೆಡ್‌ಕ್ರಾಸ್ ಘಟಕಗಳ ಉದ್ಘಾಟನೆ ಹಾಗೂ ಇಂಡಕ್ಷನ್ ಕಾರ್ಯಕ್ರಮ ಆಯೋಜಿಸಲಾಗಿತ್ತು. ದಾವಣಗೆರೆ ಸಿಎಲ್‌ಎಟಿ ತರಬೇತಿ ಕೇಂದ್ರದ ಮುಖ್ಯಸ್ಥ ಸುರೇಶ್ ಶಾಸ್ತ್ರಿ, ಎಸ್‌ಆರ್‌ಎಸ್ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಡಾ.ಟಿ.ಎಸ್.ರವಿ, ಪ್ರಾಚಾರ್ಯ ಪ್ರೊ.ಜಿ.ಪಿ.ನಂದನ್, ಪ್ರೊ.ಕಲ್ಲಿನಾಥ್, ಪ್ರೊ.ಸಾಧನಾ ಅಭಿಷೇಕ್, ಪ್ರೊ.ಕೆ.ದೇವೇಂದ್ರಪ್ಪ, ಡಾ.ಚಂದ್ರಶೇಖರ್, ಜೆ.ರಮೇಶ್ ಇದ್ದರು.