

ಮೈಸೂರು: ನಗರದ ಕ್ಯಾಪಿಟಲ್ ಪಬ್ಲಿಕ್ ಸ್ಕೂಲ್‌ನಲ್ಲಿ 7ನೇ ತರಗತಿಯ 12 ವರ್ಷದ ಎಸ್.ಪ್ರಣವ್ ಗಣೇಶನ ನಾಮಗಳನ್ನು ಪಠಿಸುತ್ತಾ 3ಗಿ3 ರೂಬಿಕ್ಸ್ ಕ್ಯೂಬ್ ಅನ್ನು ಕಡಿಮೆ ಸಮಯದಲ್ಲಿ ಪರಿಹರಿಸುವ ಮೂಲಕ ಅಂತಾರಾಷ್ಟ್ರೀಯ ದಾಖಲೆ ಬರೆದಿದ್ದಾನೆ.
ಪ್ರಣವ್ ಲಾರ್ಡ್ ಗಣೇಶನ 65 ಬಗೆಯ ಹೆಸರನ್ನು ವರ್ಣಮಾಲೆಯ ಕ್ರಮದಲ್ಲಿ ಹೇಳುತ್ತಾ 3ಗಿ3 ರೂಬಿಕ್ಸ್ ಕ್ಯೂಬ್ ಅನ್ನು ವೇಗವಾಗಿ ಪರಿಹರಿಸಿ ಇಂಟರ್‌ನ್ಯಾಷನಲ್ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ದಾಖಲೆ ನಿರ್ಮಿಸಿ ಮೈಸೂರಿಗೆ ಕೀರ್ತಿ ತಂದಿದ್ದಾನೆ. ಪ್ರಣವ್ ಕೇವಲ 1 ನಿಮಿಷ 6 ಸೆಕೆಂಡ್‌ಗಳಲ್ಲಿ ಈ ಸಾಧನೆ ಮಾಡಿದ್ದಾನೆ. ಕಳೆದ ಬೇಸಿಗೆಯಲ್ಲಿ ರೂಬಿಕ್ಸ್ ಕ್ಯೂಬ್ ಅಭ್ಯಾಸ ಮಾಡುವಾಗ ಗಣೇಶನ ಹೆಸರನ್ನು ಹೇಳಲು ಪ್ರಣವ್ ಪ್ರಾರಂಭಿಸಿದನು. ಇದೀಗ ಆತನ ಸಾಧನೆ ಅಂತಾರಾಷ್ಟ್ರೀಯ ಗೌರವ ಲಭಿಸಿದೆ.
‘ಮೊದಲಿಗೆ ರೂಬಿಕ್ಸ್ ಕ್ಯೂಬ್ ಮಾಡುವಾಗ ಗಣೇಶನ ಹೆಸರನ್ನು ಹೇಳಲು ಪ್ರಾರಂಭಿಸಿದೆ. ಇದರಿಂದ ಗಣೇಶನ ಹೆಸರುಗಳು ಪರಿಚಯವಾದವು. ಇದೇ ಇಂಟರ್‌ನ್ಯಾಷನಲ್ ಬುಕ್ ಆಫ್ ರೆಕಾರ್ಡ್ಸ್ ಮಾಡಲು ಪ್ರೇರಣೆ ನೀಡಿತು. ಮುಂದಿನ ಬೇಸಿಗೆಯ ವೇಳೆಗೆ ಕೇವಲ 30 ಸೆಕೆಂಡ್‌ಗಳಲ್ಲಿ ಗಣಪತಿ ನಾಮಗಳನ್ನು ಪಠಿಸುವ ಮೂಲಕ ಗಿನ್ನೆಸ್ ರೆಕಾರ್ಡ್ ಮಾಡಬೇಕೆಂದುಕೊಂಡಿದ್ದೇನೆ’ ಎಂದು ಪ್ರಣವ್ ಸಂತಸ ವ್ಯಕ್ತಡಿಸಿದ್ದಾರೆ.
ಸ್ವತಃ ‘ಪೈಥಾನ್’ ಕಲಿಯುತ್ತಿರುವ ಪ್ರಣವ್ ಕಂಪ್ಯೂಟರ್ ಪ್ರೋಗ್ರಾಮಿಂಗ್, ಕೃತಕ ಬುದ್ಧಿಮತ್ತೆ ಮತ್ತು ಯಂತ್ರ ಕಲಿಕೆಯಲ್ಲಿ ಆಸಕ್ತಿ ಹೊಂದಿದ್ದಾನೆ. ರೂಬಿಕ್ಸ್ ಕ್ಯೂಬ್‌ನಲ್ಲಿ ಮಾತ್ರವಲ್ಲದೆ ವಿವಿಧ ಸ್ಪರ್ಧೆಗಳಲ್ಲಿ ಪದಕ ಗೆದ್ದಿರುವ ಪ್ರಣವ್ ಅತ್ಯುತ್ತಮ ಕರಾಟೆಪಟುವೂ ಆಗಿದ್ದಾನೆ. ಪ್ರಣವ್ ತಂದೆ ಕೆ.ಟಿ.ಸ್ವಾಮಿ ವಕೀಲರಾಗಿದ್ದು, ತಾಯಿ ಸೌಮ್ಯಾ ಚನ್ನಯ್ಯ ಜೆಎಸ್‌ಎಸ್ ಮಹಾವಿದ್ಯಾಪೀಠದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.