

ಚಿಕ್ಕೋಡಿ: ಎತ್ತಿನಗಾಡಿ ಶರ್ಯತ್ತುಗಳು ಹಳ್ಳಿ ಸೊಗಡನ್ನು ಎತ್ತಿ ಹಿಡಿದು ಸಂಸ್ಕೃತಿ ಪ್ರತಿಬಿಂಬಿಸುತ್ತವೆ ಎಂದು ಶಾಸಕ ಡಿ.ಎಂ. ಐಹೊಳೆ ಹೇಳಿದರು.
ತಾಲೂಕಿನ ಬೆಳಕೂಡ ಗ್ರಾಮದಲ್ಲಿ ಹನುಮಾನ ಜಾತ್ರೆ ಅಂಗವಾಗಿ ಸೋಮವಾರ ಆಯೋಜಿಸಿದ್ದ ಎತ್ತಿನಗಾಡಿ, ಕುದುರೆಗಾಡಿ ಶರ್ಯತ್ತುಗಳಿಗೆ ಚಾಲನೆ ನೀಡಿ ಮಾತನಾಡಿದರು. ಯುವಪೀಳಿಗೆ ಮೊಬೈಲ್, ಇಂಟರ್ನೆಟ್ ಮೊದಲಾದ ಡಿಜಿಟಲ್ ಮಾಧ್ಯಮಗಳ ಆಟದಲ್ಲೇ ಮೈ ಮರೆಯುತ್ತಿದ್ದು, ದೇಸಿ ಕ್ರೀಡೆ ಮರೆಯಾಗುತ್ತಿವೆ ಎಂದರು.
ಶರ್ಯತ್ತು ವಿಜೇತರಿಗೆ ನಗದು ಹಾಗೂ ಶೀಲ್ಡ್ ನೀಡಿ ಗೌರವಿಸಲಾಯಿತು. ಚಂದ್ರಶೇಖರ ಅರಭಾಂವಿ, ಬಸವರಾಜ ಕುಂಬಾರ, ಮಹಾಂತೇಶ ಯಶವಂತ, ದೇವರಾಜ ಪಾಶ್ಚಾಪೂರೆ, ಸಂಭಾಜಿ ಚವ್ಹಾಣ, ನಟರಾಜ ಹಿರೇಮಠ, ಕುಮಾರ ಕರನಿಂಗ, ಅಜಿತ್ ಶಿವಪೂಜಿ, ಮಲ್ಲಿಕಾರ್ಜುನ ಬೀಡ, ಶಂಕರ ಗಿರಜಾಯಿ, ರಾಜು ಮೋರೆ, ಪ್ರವೀಣ ಹಿರೇಮಠ ಹಾಗೂ ಜಾತ್ರಾ ಕಮಿಟಿ ಸದಸ್ಯರು ಇದ್ದರು.