ಇಂಜಿನಿಯರ್ಸ್ ಪ್ರೀಮಿಯರ್ ಲೀಗ್'ಗೆ ಚಾಲನೆ

Felicitation
Published on

ಮೈಸೂರು: ಮಹಾರಾಜ ತಾಂತ್ರಿಕ ಮಹಾವಿದ್ಯಾಲಯ ಆಯೋಜಿಸುವ ಇಂಜಿನಿಯರ್ಸ್ ಪ್ರೀಮಿಯರ್ ಲೀಗ್ ಎರಡನೇ ಆವೃತ್ತಿಯನ್ನು ಗುರುವಾರ ಕಾಲೇಜು ಮೈದಾನದಲ್ಲಿ ಉದ್ಘಾಟಿಸಲಾಯಿತು.
ಕಳೆದ ವರ್ಷ ಉತ್ತಮ ಯಶಸ್ಸನ್ನು ಕಂಡ ಈ ವಿಶಿಷ್ಟವಾದ ಅಂತರ ಇಂಜಿನಿಯರಿಂಗ್ ಕಾಲೇಜು ಮಿಶ್ರ ಕ್ರಿಕೆಟ್ ಲೀಗ್‌ನಲ್ಲಿ ತಂಡದ ಸಂಯೋಜನೆಯು 6 ಪುರುಷ ಸಿಬ್ಬಂದಿ, 3 ಪುರುಷ ವಿದ್ಯಾರ್ಥಿಗಳು, 1 ಮಹಿಳಾ ಉದ್ಯೋಗಿ ಮತ್ತು 1 ವಿದ್ಯಾರ್ಥಿನಿ ಒಳಗೊಂಡಿರುತ್ತದೆ.

ಮೈಸೂರು ಮತ್ತು ಸುತ್ತಮುತ್ತಲಿನ ವಿವಿಧ ಇಂಜಿನಿಯರಿಂಗ್ ಕಾಲೇಜುಗಳ 12 ತಂಡಗಳು ಚಾಂಪಿಯನ್‌ಷಿಪ್ ಮತ್ತು ಇತರ ಸ್ಥಾನಗಳಿಗಾಗಿ ಸೆಣಸಾಡಲಿವೆ. ಸದರಿ ಪಂದ್ಯಾವಳಿಯ ಮತ್ತೊಂದು ವಿಶೇಷವೆಂದರೆ ಎಲ್ಲ ಪಂದ್ಯಗಳನ್ನು ಕಾಲೇಜಿನ ಅಧಿಕೃತ ಯೂಟ್ಯೂಬ್ ಚಾನೆಲ್ ್ಜ್ಞಚ್ಞಐಖ್ಟ - ಜ್ಞಾನಮಿತ್ರದಲ್ಲಿ ನೇರಪ್ರಸಾರ ವೀಕ್ಷಿಸಬಹುದಾಗಿದೆ.

1 ಲಕ್ಷಕ್ಕಿಂತ ಹೆಚ್ಚಿನ ಬಹುಮಾನದ ಮೊತ್ತವನ್ನು ಗೆಲ್ಲಬಹುದಾದ ಈ ಕ್ರಿಕೆಟ್ ಹಬ್ಬಕ್ಕೆ ಎಥ್ನೋಟೆಕ್ ಅಕಾಡೆಮಿಕ್ ಸಲ್ಯೂಷನ್ಸ್ ಪ್ರೈ. ಲಿ., ನಾಜ್ ಜ್ಯುವೆಲರ್ಸ್, ಮ್ಯಾಕ್ಸ್ ಸ್ವಿಚ್ ಇಂಟೀರಿಯರ್ ಆರ್ಕಿಟೆಕ್ಟ್ಸ್, ಶ್ರೀ ಮಹಾವೀರ್ ಟ್ರೇಡರ್ಸ್, ಜೆನೆಸಿಸ್ ಟ್ರೇನಿಂಗ್, ಸ್ಪೋರ್ಟಿವಿ , ಎಸ್.ಎಂ.ಸ್ಕ್ವೇರ್ ರಿಯಲ್ಟರ್ಸ್, ನಕ್ಷೆ ಪ್ರಾಜೆಕ್ಟ್ಸ್ ಮತ್ತು ಪ್ರಾಪರ್ಟೀಸ್ ಕನ್ಸಲ್ಟೆಂಟ್ಸ್, ಪದ್ಮಪ್ರಿಯಾ ಕನ್ಸ್ಟ್ರಕ್ಷನ್ಸ್ ಮತ್ತು ಹಂಸರಾಜ್ ಸ್ಪೋರ್ಟ್ಸ್ ಪ್ರಾಯೋಜಕತ್ವ ವಹಿಸಿಕೊಂಡಿದೆ. ಮಲ್ಟಿ ಫಿಟ್ ಸ್ಪೋರ್ಟ್ಸ್, ಜಿ.ಸಿ. ಸ್ಪೋರ್ಟ್ಸ್ ಮೆಡಿಸಿನ್ ಆಸ್ಪತ್ರೆಗಳ ಬೆಂಬಲವಿದೆ.

ಗುರುವಾರ ನಡೆದ ಸಮಾರಂಭವನ್ನು ಕೆಎಸ್‌ಸಿಎ ಮೈಸೂರು ವಲಯದ ಸಂಚಾಲಕ ಸುಧಾಕರ ರೈ ಮತ್ತು ಸೈಕಲ್ ಪ್ಯೂರ್ ಅಗರಬತ್ತಿಯ ಸಿಒಒ ಎಂ.ಆರ್.ಸುರೇಶ್ ಉದ್ಘಾಟಿಸಿದರು.
ಭವಿಷ್ಯದಲ್ಲಿ ಕಂಪ್ಯೂಟರ್ ಮುಂದೆ ಹೆಚ್ಚಿನ ಸಮಯವನ್ನು ಕಳೆಯಬೇಕಾಗಿರುವುದರಿಂದ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ದೈಹಿಕ ಸದೃಢತೆಯನ್ನು ಕಾಪಾಡಿಕೊಳ್ಳಬೇಕು ಎಂದು ಸುಧಾಕರ ರೈ ಅಭಿಪ್ರಾಯಪಟ್ಟರು. ಎಂ.ಆರ್.ಸುರೇಶ್ ಮಾತನಾಡಿ, ಇಂಜಿನಿಯರ್‌ಗಳು ಎಲ್ಲ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದ್ದು, ಅವರು ಹುಡುಕಿದರೆ ಎಲ್ಲ ಕ್ಷೇತ್ರಗಳಲ್ಲಿ ಅವಕಾಶಗಳು ಸಿಗುತ್ತಲೇ ಇರುತ್ತವೆ ಎಂದು ತಿಳಿಸಿದರು.

ಎಂಇಟಿಯ ಕಾರ್ಯದರ್ಶಿ ಡಾ.ಟಿ.ವಾಸುದೇವ್, ಪ್ರಾಂಶುಪಾಲ ಡಾ.ಬಿ.ಜಿ.ನರೇಶ್ ಕುಮಾರ್, ಆಡಳಿತಾಧಿಕಾರಿ ಎ.ಎಂ.ಅನಿರುದ್ಧ , ಎಂಐಟಿಎಂನ ಕ್ರೀಡಾ ಸಮಿತಿ ಅಧ್ಯಕ್ಷ ಡಾ.ಮೊಹಮ್ಮದ್ ಖೈಸರ್ ಇನ್ನಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net