

ಕಲಬರಗಿ: ಕನ್ಸ್ಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ ಅಸೋಸಿಯೇಷನ್‌ನಿಂದ ನಗರದ ಶ್ರೀ ಶರಣಬಸವೇಶ್ವರ ದೇವಸ್ಥಾನದ ಬಳಿಯ ಕಲ್ಯಾಣಿ ಕಲ್ಯಾಣ ಮಂಟಪದಲ್ಲಿ ಸೆ.೧೫ರಂದು ಬೆಳಗ್ಗೆ ೧೦.೩೦ಕ್ಕೆ ಆಯೋಜಿಸಲಾಗಿದೆ ಎಂದು ಅಸೋಸಿಯೇಷನ್ ಜಿಲ್ಲಾಧ್ಯಕ್ಷ ದೀಪಕ ಕೌಲ್ಗಿಕರ್ ಹೇಳಿದರು.
ಮೇಯರ್ ಯಲ್ಲಪ್ಪ ನಾಯ್ಕೋಡಿ, ನಿವೃತ್ತ ಪಿಡಬ್ಲೂಡಿ ಎಇ ಐ.ಎಸ್.ಮಹಗಾಂವಕರ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿz್ದÁರೆ. ಸಿಎ ಉತ್ತಮ ಬಜಾಜ್, ಕಂಪನಿ ದಶರಥ ಹಿರೋಜಿಕರ್ ಅತಿಥಿಗಳಾಗಿ ಭಾಗವಹಿಸುವರು. ಅಸೋಸಿಯೇಷನ್ ಹಿರಿಯ ಸದಸ್ಯ ಅನೀಲಕುಮಾರ ನಾಗನಳ್ಳಿ, ಶಿವಕುಮಾರ ಖೆಳ್ಗಿ ಅವರನ್ನು ಸನ್ಮಾನಿಸಲಾಗುವುದು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸೆ.೧೪ರಂದು ಇಎಸ್‌ಐಸಿ ಆಸ್ಪತ್ರೆಯಲ್ಲಿನ ಸುಮಾರು ೨೦೦ಕ್ಕೂ ಹೆಚ್ಚಿನ ರೋಗಿಗಳಿಗೆ ಅಸೋಸಿಯೇಷನ್‌ನಿಂದ ಹಣ್ಣು ಹಂಪಲ ವಿತರಿಸಲಾಗುವುದು ಎಂದು ಹೇಳಿದರು.
ಅಸೋಸಿಯೇಷನ್ ಕಾರ್ಯದರ್ಶಿ ಪ್ರವೀಣಕುಮಾರ ಮೋದಿ, ಜಂಟಿ ಕಾರ್ಯದರ್ಶಿ ರಾಕೇಶ ಕೊಳ್ಳುರ, ಜಂಟಿ ಖಜಾಂಚಿ ರಾಜಶೇಖರ ಯರಗೋಳ, ಅಂಬರೀಶ ಪಾಟೀಲ್, ಪ್ರವೀಣ ಬಿರಾದಾರ ಇತರರಿದ್ದರು.