

ಚಿತ್ರದುರ್ಗ:ಅತ್ಯಧಿಕ ಲಾಭದ ಆಸೆಯಿಂದ ನಗರದ ಇಂಜಿನಿಯರ್ ಒಬ್ಬರು ಸೈಬರ್ ವಂಚಕರು ಬೀಸಿದ ಮೋಸದ ಜಾಲಕ್ಕೆ ಬಿದ್ದು ಲಕ್ಷಾಂತರ ರೂ.ನಗದು ಕಳೆದುಕೊಂಡಿದ್ದಾರೆ.
ನಗರದ ಐಯುಡಿಪಿ ಲೇಔಟ್ ನಿವಾಸಿ ವಿಶ್ವನಾಥ್ ಅವರು ಫೇಸ್‌ಬುಕ್‌ನಲ್ಲಿದ್ದ ಸ್ಟಾಕ್‌ಮಾರ್ಕೆಟ್ ಗ್ರೂಫ್‌ವೊಂದಕ್ಕೆ ಜಾಯಿನ್ ಸೇರಿ ದ್ದಾರೆ ಹಾಗೂ ಮೇ 7ರಂದು 2.15 ಲಕ್ಷ ರೂ.ಗಳನ್ನು ಪಾವತಿಸಿದ್ದಾರೆ. ಹಣ ಪಡೆದ ವಂಚಕರು,ತಮಗೆ 53 ಲಕ್ಷ ರೂ.ಲಾಭಬಂದಿದೆ ಎಂ ದು ಹೇಳಿ ಮತ್ತಷ್ಟು ಹಣ ಹಾಕಲು ತಿಳಿಸಿದ್ದು, ಅವರ ಮಾತನ್ನು ನಂಬಿದ ವಿಶ್ವನಾಥ್ ಅವರು,ಮೇ 13ರಂದು 2 ಲಕ್ಷ ರೂ.ಹಾಗೂ ಮೇ 15 ರಂದು 3.12 ಲಕ್ಷ ರೂ.ಹೀಗೆ ಒಟ್ಟು 7.27 ಲಕ್ಷ ರೂ.ಪಾವತಿಸಿದ್ದಾರೆ.
ಆದರೆ ಯಾವುದೇ ಲಾಭಾಂಶ ಮರಳಿ ಬಂದಿಲ್ಲ. ಇದರಿಂದ ಅನುಮಾನಗೊಂಡು ಪಾವತಿಸಿದ ಹಣವನ್ನು ಹಿಂತಿರುಗಿ ಕೇಳಿದರೆ ಕಟ್ಟಿ ರುವ ಮೊತ್ತಕ್ಕೆ ಶೇ.20 ಪ್ರಮಾಣದಲ್ಲಿ ಮತ್ತೆ ಹಣ ಕಟ್ಟುವಂತೆ ಕೇಳಿದ್ದಾರೆ ಎಂದು ವಿಶ್ವನಾಥ್ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಬಡಾವಣೆ ಠಾಣೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.