

ಶಹಾಪುರ: ರಾಷ್ಟçದ ಪ್ರಗತಿ ಹೃದಯ ಭಾಗವಾಗಿರುವ ಇಂಜಿನಿಯರ್‌ಗಳು ವಿವಿಧ ಕ್ಷೇತ್ರಗಳ ನಾವಿನ್ಯತೆ ಮತ್ತು ಸುಸ್ಥಿರ ಅಭಿವೃದ್ಧಿಯನ್ನು ಮುನ್ನಡೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಕೃಷ್ಣಾ ಭಾಗ್ಯ ಜಲ ನಿಗಮದ ಮುಖ್ಯ ಅಭಿಯಂತರ ಪ್ರೇಮಸಿಂಗ್ ಹೇಳಿದರು.
ಭೀಮರಾಯನಗುಡಿಯ ನಿಗಮದ ಕಚೇರಿ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ವಿವಿಧ ವಿಭಾಗದ ಅಭಿಯಂತರರಿಗೆ ಭಾರತರತ್ನ ಸರ್ ಎಂ.ವಿಶ್ವೇಶ್ವರಯ್ಯ ಇಂಜಿನಿಯರ್ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು, ಇಂಜಿನಿಯರ್‌ಗಳು ಆರ್ಥಿಕ ಕೃಷಿ, ತಾಂತ್ರಿಕ, ನೀರಾವರಿ ಕ್ಷೇತ್ರದ ಅಭಿವೃದ್ಧಿ ಚಾಲಕರಾಗಿ ಜಲಸಂಪನ್ಮೂಲ ಮತ್ತು ನೀರಿನ ಪರಿಣಾಮಕಾರಿ ಸುಸ್ಥಿರ ನಿರ್ವಹಣೆ ಜವಾಬ್ದಾರಿ ಹೊತ್ತು ಕಾರ್ಯನಿರ್ವಹಿಸುತ್ತಿದ್ದಾರೆ. ನೀರಾವರಿ ಇಲಾಖೆ ಯೋಜನೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸುವಲ್ಲಿ ತಮ್ಮೆಲ್ಲರ ಪಾತ್ರ ಮಹತ್ವದ್ದಾಗಿದೆ ಎಂದು ಬಣ್ಣಿಸಿದರು.
ನಿಗಮದ ಅಧಿಕಾರಿಗಳಾದ ಮಹೇಶ ಮಾಲಗತ್ತಿ, ತಿಪ್ಪಣ್ಣಗೌಡ ಅನ್ನದಾನಿ, ಸಂಗಮನಾಥ, ಅಯಾಜ್ ಅಹ್ಮದ್, ಸೈಯದ್ ಇರ್ಫಾನ್, ಗುರುಲಿಂಗಪ್ಪ, ಶಿವಪ್ಪ ವಕ್ರಾಣಿ, ಓಂಪ್ರಕಾಶ ಕರಣಗಿ, ಪಿ.ಸತ್ಯನಾರಾಯಣ ಇತರರಿದ್ದರು.
ಅಧೀಕ್ಷಕ ಅಭಿಯಂತರ ಲಕ್ಷö್ಮಣ ಎಂ.ನಾಯಕ, ಕಾರ್ಯಪಾಲಕ ಅಭಿಯಂತರ ವಿಜಯಕುಮಾರ ಮುಚಳಂಬೆ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಅಮಿತ ಕ್ಯಾತನವರ, ಕಲ್ಯಾಣಕುಮಾರ, ಗೋಪಾಲಸಿಂಗ್, ಉಮರ್ ಅಲಿ, ಉದಯಕುಮಾರ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.