ಇಂಜಿನಿಯರ್, ತಾಂತ್ರಿಕ ಅಧಿಕಾರಿಯಿಂದ ರಸ್ತೆ ಪರಿಶೀಲನೆ

12spt1
Published on

ಸೋಮವಾರಪೇಟೆ: ಮಾಗಡಿ-ಜಾಲ್ಸೂರು ರಾಜ್ಯ ಹೆದ್ದಾರಿ 85ರ ಸೋಮವಾರಪೇಟೆ-ಅಲೆಕಟ್ಟೆ-ತೋಳೂರುಶೆಟ್ಟಳ್ಳಿ-ಕೂತಿ ಮಾರ್ಗದ 20 ಕೋಟಿ ರೂ.ವೆಚ್ಚದ ರಸ್ತೆ ಕಾಮಗಾರಿ ಅವೈಜ್ಞಾನಿಕ ಆರೋಪದ ಹಿನ್ನೆಲೆ ಗುರುವಾರ ಕಾಮಗಾರಿ ಸ್ಥಳಕ್ಕೆ ಇಂಜಿನಿಯರ್ ಆರ್ಭಸ್ ಹಾಗೂ ಸಿವಿಲ್ ಎಕ್ಸ್‌ಪರ್ಟ್ ಟೆಸ್ಟಿಂಗ್ ಸೆಂಟರ್‌ನ ತಾಂತ್ರಿಕ ಅಧಿಕಾರಿ ತಿಲಕ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಯೋಜನಾ ಪಟ್ಟಿಯಂತೆ ಕಾಮಗಾರಿ ನಡೆಯುತ್ತಿದೆ. ಕೆಲವೆಡೆ ಕೆಲಸದಲ್ಲಿ ಒಂದಷ್ಟು ವ್ಯತ್ಯಯವಾಗಿದೆ. ತಕ್ಷಣದಿಂದಲೇ ಸರಿಪಡಿಸಲಾಗುವುದು. ಮಳೆ ಕಡಿಮೆಯಾದಲ್ಲಿ ಕೆಲವೆಡೆ ಕಾಂಕ್ರೀಟ್ ಕಾಮಗಾರಿ ಮಾಡುತ್ತೇವೆ. ಬಿಸಿಲು ಬಂದ ಮೇಲೆ ಡಾಂಬರೀಕರಣ ಮಾಡುತ್ತೇವೆ ಎಂದು ಇಂಜಿನಿಯರ್ ಭರವಸೆ ನೀಡಿದರು. ಕೂತಿ ಗ್ರಾಮಾಭಿವೃದ್ಧಿ ಮಂಡಳಿ ಅಧ್ಯಕ್ಷ ಎಚ್.ಎಂ.ಜಯರಾಮ್, ಚೌಡ್ಲು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೆ.ಟಿ.ಪರಮೇಶ್, ರೈತ ಸಂಘದ ತಾಲೂಕು ಅಧ್ಯಕ್ಷ ಕೆ.ಎಂ.ದಿನೇಶ್, ಆರ್‌ಟಿಐ ಕಾರ್ಯಕರ್ತ ಬಗ್ಗನ ಅನಿಲ್, ಪ್ರಮುಖರಾದ ಮಾಚಯ್ಯ, ಜಗದೀಶ್, ಎಚ್.ಡಿ.ಮೋಹನ್, ದಿವಾಕರ್, ಜಿತೇಂದ್ರ, ಶಿವರಾಜ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net