ಇಂಜಿನಿಯರಿಂಗ್ : ಸರ್ಕಾರಿ ಕೋಟಾ ಶುಲ್ಕ ಹೆಚ್ಚಳಕ್ಕೆ ಖಂಡನೆ

AIDSO
AIDSO LOGO
Published on

ಮೈಸೂರು: ಈ ವರ್ಷವೂ ಅನುದಾನರಹಿತ ಇಂಜಿನಿಯರಿಂಗ್ ಕಾಲೇಜುಗಳಿಗೆ ಸರ್ಕಾರಿ ಕೋಟಾದ ಶುಲ್ಕವನ್ನು ಹೆಚ್ಚಿಸಲು ಸಮ್ಮತಿಸಿರುವ ರಾಜ್ಯ ಸರ್ಕಾರದ ಕ್ರಮವನ್ನು ಎಐಡಿಎಸ್‌ಒ ವಿದ್ಯಾರ್ಥಿ ಸಂಘಟನೆ ಖಂಡಿಸಿದೆ.

ಪ್ರತಿ ಶೈಕ್ಷಣಿಕ ವರ್ಷವೂ ಶುಲ್ಕವನ್ನು ಹೆಚ್ಚಿಸುವುದು ಒಂದು ರೂಢಿಯಾಗಿಬಿಟ್ಟಿದೆ. ಈಗಾಗಲೇ ಅನುದಾನರಹಿತ ಮತ್ತು ಖಾಸಗಿ ಕಾಲೇಜುಗಳಿಗೆ ಆಡಳಿತ ಮಂಡಳಿಯ ಕೋಟಾದ ಶುಲ್ಕ ನಿಗದಿಪಡಿಸಲು ಯಾವುದೇ ನಿರ್ಬಂಧವಿಲ್ಲ.

ಕನಿಷ್ಠ ಪಕ್ಷ ಈ ಕಾಲೇಜುಗಳಲ್ಲಿನ ಸರ್ಕಾರಿ ಕೋಟಾದ ಸೀಟುಗಳಾದರೂ ಎಲ್ಲ ವರ್ಗದ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಇರಬೇಕಿತ್ತು. ಆದರೆ ಸರ್ಕಾರವು ಅವರ ಬೇಡಿಕೆಗೆ ಸಮ್ಮತಿಸಿರುವುದು ಉನ್ನತ ಶಿಕ್ಷಣದ ಬಗ್ಗೆ ಸರ್ಕಾರದ ಮನೋಭಾವ ತೋರಿಸುತ್ತದೆ.

ಈ ಧೋರಣೆಯು ಖಂಡನೀಯ. ಸರ್ಕಾರವು ಪ್ರತಿ ವರ್ಷದ ಈ ಶುಲ್ಕ ಹೆಚ್ಚಳವು ಶಿಕ್ಷಣದ ಮೂಲ ಪರಿಕಲ್ಪನೆಯ ಮೇಲಿನ ದಾಳಿಯಾಗಿದೆ. ಕೂಡಲೇ ಹೆಚ್ಚಿಸಿರುವ ಶುಲ್ಕವನ್ನು ಹಿಂಪಡೆಯಬೇಕೆಂದು ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ನಿತಿನ್ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net