ಇಂಜಿನಿಯರಿಂಗ್​ ವೃತ್ತಿ ಮತ್ತು ಪ್ರವೇಶಕ್ಕಾಗಿ ನಡೆದ ಜಾಗೃತಿ ಕಾರ್ಯಕ್ರಮ

WEB LOGO
Published on

ವಿಜಯಪುರ : ನಗರದ ಬಿಎಲ್​ಡಿಇ ಅಸೋಸಿಯೇಷನ್​ ವಿ.ಪಿ. ಡಾ. ಪಿ.ಜಿ. ಹಳಕಟ್ಟಿ ಇಂಜಿನಿಯರಿಂಗ್​ ಮತ್ತು ತಂತ್ರಾನ ಕಾಲೇಜಿನಲ್ಲಿ ಸೋಮವಾರ ಇಂಜಿನಿಯರಿಂಗ್​ ವೃತ್ತಿ ಮತ್ತು ಪ್ರವೇಶಕ್ಕಾಗಿ ಆಯ್ಕೆ ನಮೂದು ಕುರಿತು ಜಾಗೃತಿ ಕಾರ್ಯಕ್ರಮ ಎಂಬ ವಿಷಯದ ಕುರಿತಾಗಿ ದ್ವೀತಿಯ ಪಿಯುಸಿ ಪೊರೈಸಿದ ವಿದ್ಯಾರ್ಥಿಗಳಿಗೆ ಮತ್ತು ಪಾಲಕರಿಗಾಗಿ ಜಾಗೃತಿ ಕಾರ್ಯಕ್ರಮ ನಡೆಯಿತು.

ಕಾಲೇಜಿನ ಪ್ರಾಚಾರ್ಯ ಡಾ. ಮಂಜುನಾಥ ಪಿ. ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂಜಿನಿಯರಿಂಗ್​ ವಿದ್ಯಾಭ್ಯಾಸದ ಮಹತ್ವ, ವಿವಿಧ ಇಂಜಿನಿಯರಿಂಗ್​ ಶಾಖೆಗಳು, ಕೋರ್ಸ್​ನ ನಂತರ ಲಭ್ಯವಿರುವ ಅವಕಾಶ ಹಾಗೂ ಪ್ಲೇಸ್ಮೇಂಟ್​ ಪ್ರಕ್ರಿಯೆ, ಕಂಪನಿಗಳ ನಿರೀೆಗಳು ಸೇರಿ ಮುಂತಾದ ವಿಷಯಗಳ ಕುರಿತು ವಿವರವಾಗಿ ತಿಳಿಸಿದರು. ಅಲ್ಲದೆ, ವಿದ್ಯಾರ್ಥಿಗಳು ಪ್ರವೇಶದ ವೇಳೆ ಕಾಲೇಜು ಹಾಗೂ ಕೋರ್ಸ್​ ಆಯ್ಕೆ ಮಾಡುವಾಗ ಎದುರಿಸುವ ಗೊಂದಲಗಳ ಬಗ್ಗೆ ಸೂಕ್ತ ಮಾರ್ಗದರ್ಶನ ನೀಡಿದರು.

ಪ್ರವೇಶ ಸಂಯೋಜಕ ಪ್ರೊ. ಎಸ್​.ಎಸ್​. ನುಚ್ಚಿ, ಸಿಇಟಿ ಆಯ್ಕೆ ಪ್ರಕ್ರಿಯೆ, ಆಯ್ಕೆ ನಮೂದು, ಸೀಟ್​ ಹಂಚಿಕೆ ನಂತರದ ಕ್ರಮಗಳು, ಕಾಲೇಜು ಆಯ್ಕೆ ಮಾಡುವಾಗ ಗಮನಿಸುವ ಅಂಶಗಳು ಸೇರಿದಂತೆ ಮುಂತಾದ ಬಗ್ಗೆ ಉಪಯುಕ್ತ ಮಾಹಿತಿ ಒದಗಿಸಿದರು.

ವಾಸ್ತಶಿಲ್ಪ ವಿಭಾಗದ ಮುಖ್ಯಸ್ಥ ಸತೀಶ ನಡುವಿನಮನಿ, ವಾಸ್ತುಶಿಲ್ಪ ಕೋರ್ಸ್​ನ ಮಹತ್ವ, ಅದರ ಉದ್ಯೋಗಾವಕಾಶ ಹಾಗೂ ಪ್ರವೇಶಕ್ಕೆ ಬೇಕಾದ ಅರ್ಹತೆ ಸೇರದಂತೆ ನಾಟಾ ಪರೀೆಯ ಪ್ರಕ್ರಿಯೆ ಬಗ್ಗೆ ವಿದ್ಯಾರ್ಥಿಗಳಿಗೆ ವಿವರಿಸಿದರು.

ಜಾಗೃತಿ ಕಾರ್ಯಕ್ರಮದಲ್ಲಿ ವಿಜಯಪುರ ಜಿಲ್ಲೆ ಹಾಗೂ ಸುತ್ತಮುತ್ತಲಿನ ವಿವಿಧ ಭಾಗಗಳಿಂದ ವಿದ್ಯಾರ್ಥಿಗಳು ಮತ್ತು ಪಾಲಕರು ಭಾಗವಹಿಸಿ ಉಪಯುಕ್ತ ಮಾಹಿತಿ ಪಡೆದರು. ಕಾಲೇಜು ನಿರ್ದೇಶಕ ಡಾ. ವಿ.ಜಿ. ಸಂಗಮ, ಪ್ರೊ. ಸುನೀಲ್​ಕುಮಾರ ಬಿರಾದಾರ ಮತ್ತಿತರರಿದ್ದರು.

**

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net