

ವಿಜಯಪುರ: ಸ್ವಾತಂತ್ರ್ಯ ಬಂದು 75 ವರ್ಷದ ಬಳಿಕ ಕೊನೆಗೂ ವಿಜಯಪುರ ಜಿಲ್ಲಾಡಳಿತ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಮಠವನ್ನ ಗುರುತಿಸಿ ಗೌರವ ಸಲ್ಲಿಸಿದೆ. ಚಡಚಣ ತಾಲೂಕಿನ ಇಂಚಗೇರಿ ಮಠ ಸ್ವಾತಂತ್ರ್ಯಕ್ಕಾಗಿ ಹೋರಾಟವನ್ನ ಮಾಡಿತ್ತು. ಆದ್ರೆ ಸರ್ಕಾರ ಬ್ರಿಟಿಷರ ವಿರುದ್ಧ ಹೋರಾಡಿದ್ದ ಮಠವನ್ನೆ ಮರೆತು ಬಿಟ್ಟಿತ್ತು. ಸಧ್ಯ 75ನೇ ಸ್ವಾತಂತ್ರ್ಯ ದಿನದ ಅಮೃತ ಮಹೋತ್ಸವದ ವೇಳೆ ವಿಜಯಪುರ ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ ಇಂಚಗೇರಿ ಮಠದ ಹೋರಾಟವನ್ನು ಗುರುತಿಸಿ ಗೌರವ ಸಲ್ಲಿಸಿದ್ದಾರೆ. ಇಂಚಗೇರಿ ಮಠದಲ್ಲಿಯೇ ಜಿಲ್ಲಾ ಮಟ್ಟದ ಆಜಾದಿ ಕಾ ಅಮೃತಮಹೋತ್ಸವ ಕಾರ್ಯಕ್ರಮ ಆಯೋಜನೆ ಮಾಡುವ ಮೂಲಕ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಇಂಚಗೇರಿ ಮಠದ ಮಾಧವಾನಂದ ಪ್ರಭುಜಿಗಳನ್ನು ಕೊಂಡಾಡುವ ಕೆಲಸ ಮಾಡಿದ್ದಾರೆ.ವಿಜಯಪುರ ಡಿಸಿ ವಿಜಯಮಹಾಂತೇಶ ದಾನಮ್ಮನವರ ನಿರ್ದೇಶನದಂತೆ ಇಂಚಗೇರಿ ಮಠದಲ್ಲಿ ಅಮೃತ ಮಹೋತ್ಸವದ ಹಿನ್ನೆಲೆ ಸಾಂಸ್ಕೃತಿಕ ಸೌರಭ ಕಾರ್ಯಕ್ರಮವನ್ನ ಅದ್ದೂರಿಯಾಗಿ ಆಯೋಜಿಸಲಾಯಿತು. ಸ್ವಾತಂತ್ರ್ಯಕ್ಕಾಗಿ ಸಶಸ್ತ್ರವಾಗಿ ಹೋರಾಟ ಮಾಡಿದ ಅಂದಿನ ಮಠದ ಪೀಠಾಧಿಕಾರಿಗಳಾಗಿದ್ದ ಮಾಧವಾನಂದ ಪ್ರಭೂಜಿಗಳ ಭಾವಚಿತ್ರ ಮೆರವಣಿಗೆ ನಡೆಯಿತು. ಮಠದ ಪೀಠಾಧಿಪತಿಗಳಾದ ರೇವಣಸಿದ್ದೇಶ್ವರ ಶ್ರೀಗಳು ತ್ರಿವರ್ಣ ಧ್ವಜದ ಮೂಲಕ ಚಾಲನೆ ನೀಡಿದರು. ಇಂಚಗೇರಿಯ ಮಾಧವಾನಂದ ವೃತ್ತದಿಂದ 120ಕ್ಕೂ ಅಧಿಕ ಕಲಾವಿದರು, ನೂರಾರು ಶಾಲಾ ವಿದ್ಯಾರ್ಥಿಗಳು ರಾಷ್ಟ್ರಧ್ವದ ಸಮೇತ ಮೆರವಣಿಗೆಯಲ್ಲಿ ಭಾಗವಿಸಿದರು. ಸಾವಿರಕ್ಕು ಅಧಿಕ ಗ್ರಾಮಸ್ಥರು ಈ ಸಂಭ್ರಮಕ್ಕೆ ಸಾಕ್ಷಿಯಾದರು. ಈ ಕಾರ್ಯಕ್ರಮದಲ್ಲಿ ಸ್ವತಃ ಪಾಲ್ಗೊಂಡ ವಿಜಯಪುರ ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ ಡೊಳ್ಳು ಬಾರಿಸಿ ಸಾಂಸ್ಕೃತಿಕ ಸೌರಭ ಕಾರ್ಯಕ್ರಮ ಉದ್ಘಾಟಿಸಿದರು. ರೇವಣಸಿದ್ದೇಶ್ವರ ಶ್ರೀಗಳು ಡೊಳ್ಳು ಬಾರಿಸಿ ಸಾಥ್ ನೀಡಿದರು. ಸ್ವಾತಂತ್ರ್ಯಕ್ಕಾಗಿ ಇಂಚಗೇರಿ ಮಠ ಬ್ರೀಟಿಷರ ವಿರುದ್ಧ ಹೋರಾಡಿದ ಪರಿಯನ್ನು ಕೊಂಡಾಡಿದರು. ಮಠದ ಉಗ್ರ ಹೋರಾಟದ ಬಗ್ಗೆಯುವೇದಿಕೆಯಲ್ಲಿ ಪ್ರಸ್ತಾಪಿಸುವ ಮೂಲಕ ಶ್ರೀಮಠಕ್ಕೆ ಕೃತಜ್ಞತೆ ಸಲ್ಲಿಕೆ ಮಾಡಿದ್ರು. ಇದಕ್ಕೆ ಪ್ರತಿಯಾಗಿ ಇಂಚಗೇರಿ ಮಠದ ಭಕ್ತರು ಜಿಲ್ಲಾಧಿಕಾರಿಗಳ ಕಾರ್ಯವನ್ನ ಶ್ಲಾಘಿಸಿದ್ದಾರೆ. ಇನ್ನು ಇಂಚಗೇರಿ ಮಠದಲ್ಲಿರುವ ಜಾತ್ಯಾತೀತ ನಿಲುವು, ಬಡವರ ಏಳ್ಗೇ ಸೇರಿದಂತೆ ಹಲವು ದೋರಣೆಗಳನ್ನ ಜಿಲ್ಲಾಧಿಕಾರಿಗಳು ಕೊಂಡಾಡಿದರು. ಮಠದಲ್ಲಿ ಅಂದು ಮಾಧವಾನಂದ ಶ್ರೀಗಳು ನಡೆಸಿದ 25 ಸಾವಿರ ಅಂತರ್ ಜಾತಿ-ಧರ್ಮಿಯ ವಿವಾಹಗಳನ್ನು ಪ್ರಸ್ತಾಪಿಸಿ ಮಠದ ಕಾರ್ಯವನ್ನ ಕೊಂಡಾಡಿದರು. ಇಂಥ ಮಠ ಇರೋದು ಅಪರೂಪ, ಅದು ನಮ್ಮ ವಿಜಯಪುರ ಜಿಲ್ಲೆಯಲ್ಲಿರೋದು ನನಗೆ ಹೆಮ್ಮೆ ಇದೆ ಎಂದಿದ್ದಾರೆ. ಸ್ವಾತಂತ್ರ್ಯ ಸಿಕ್ಕು 75 ವರ್ಷ ಕಳೆದರು ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಇಂಚಗೇರಿ ಮಠವನ್ನ ಗುರುತಿಸಿರಲಿಲ್ಲ. ಮಾಧ್ಯಮಗಳ ಮೂಲಕ ಈ ಬಗ್ಗೆ ಸುದ್ದಿಗಳನ್ನ ಭಿತ್ತರಿಸುತ್ತಲೆ ಬಂದಿತ್ತು. ಮಠದ ಹೋರಾಟವನ್ನು ಸ್ವಾತಂತ್ರ್ಯದಿನದ ಅಮೃತ ಮಹೋತ್ಸವದ ಸಮಯದಲ್ಲಿ ಗುರುತಿಸಿ ವಿಜಯಪುರ ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ ಅವರಿಗೆ ಮಠದ ರೇವಣಸಿದ್ದೇಶ್ವರ ಮಹಾರಾಜರು ಧನ್ಯವಾದ ಹೇಳಿದರು. ಇನ್ನು ಜಿಲ್ಲಾಧಿಕಾರಿಗಳು ಮಾಡಿದ ಇದೊಂದು ಕಾರ್ಯಕ್ಕೆ ಮಠದ ಲಕ್ಷಾಂತರ ಭಕ್ತರು ಡಿಸಿಯವರಿಗೆ ಕೃತಜ್ಞತೆಯನ್ನ ತಿಳಿಸಿದ್ದಾರೆ.