

ಚಿತ್ರದುರ್ಗ: ಸಚಿವ ಜಮೀರ್ ಅಹಮದ್ ಖಾನ್ ಆಂಗ್ಲ ಭಾಷೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದನ್ನು ವಿರೋಧಿಸಿ ಕರುನಾಡ ವಿಜಯಸೇನೆ ಕಾರ‌್ಯಕರ್ತರು ಭಾನುವಾರ ಜಿಲ್ಲಾ ಕಾಂಗ್ರೆಸ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಕನ್ನಡಕ್ಕೆ ಅವಮಾನ ಮಾಡಿರುವ,ಕನ್ನಡಿಗರಿಗೆ ದ್ರೋಹ ಎಸಗಿರುವ ಜಮೀರ್ ಅಹಮದ್ ಖಾನ್ ಅವರನ್ನು ಸಂಪುಟದಿಂದ ಕೈಬಿಡದಿ ದ್ದರೆ ಸಚಿವರು ಚಿತ್ರದುರ್ಗಕ್ಕೆ ಬಂದಂಥ ಸಂದರ್ಭದಲ್ಲಿ ಘೇರಾವ್ ಮಾಡಲಾಗುವುದು ಎಂದು ಎಚ್ಚರಿಸಿದರು.
ಬಳಿಕ ಜಮೀರ್ ಅವರಿಗೆ ಕಳಿಸುವಂತೆ ಕೋರಿ ಸ್ಲೇಟು, ಬಳಪ, ಮಗ್ಗಿ ಪುಸ್ತಕವನ್ನು ಜಿಲ್ಲಾ ಕಾಂಗ್ರೆಸ್‌ಪ್ರಧಾನ ಕಾರ‌್ಯದರ್ಶಿ ಡಿ.ಎನ್.ಮೈಲಾರಪ್ಪ ಅವರಿಗೆ ನೀಡಿದರು.
ಸೇನೆ ಜಿಲ್ಲಾಧ್ಯಕ್ಷ ಕೆ.ಟಿ.ಶಿವಕುಮಾರ್, ಮುಖಂಡರಾದ ವೀಣಾಗೌರಣ್ಣ, ಜಗದೀಶ್, ನಾಗರಾಜ್, ಮುತ್ತು, ಅಖಿಲೇಶ್, ನಿಸಾರ್ ಅಹಮದ್, ಪಿ.ಶಿವಕುಮಾರ್, ಅವಿನಾಶ್, ರವಿಕಳ್ಳಿರೊಪ್ಪ, ಕಮಲಾ, ಮಣಿಕಂಠ ಇದ್ದರು.