ಇಂಗ್ಲಿಷ್ ಶಿಕ್ಷಣ ಮೂಲಕ ಬ್ರಿಟಿಷರ ಹಿಡಿತ: ಪ್ರೊ.ಮುಜಾಫರ್ ಅಸ್ಸಾದಿ ಅಭಿಮತ

37
Published on

ಮೈಸೂರು: ಇಂಗ್ಲಿಷ್ ಶಿಕ್ಷಣ, ಭಾರತೀಯ ಕೃತಿಗಳ ಭಾಷಾಂತರ ಹಾಗೂ ದಾಖಲೀಕರಣ ಮಾಡುವ ಮೂಲಕ ಬ್ರಿಟಿಷರು ದೇಶದ ಮೇಲೆ ಹಿಡಿತ ಸಾಧಿಸಲು ಪ್ರಯತ್ನಿಸಿದ್ದರು ಎಂದು ನಿವೃತ್ತ ಪ್ರಾಧ್ಯಾಪಕ ಪ್ರೊ.ಮುಜಾಫರ್ ಅಸ್ಸಾದಿ ಹೇಳಿದರು.
ಮೈಸೂರು ವಿಶ್ವವಿದ್ಯಾಲಯದಿಂದ ಮಾನಸಗಂಗೋತ್ರಿ ವಿಜ್ಞಾನ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ದೇಶವನ್ನಾಳಿತ ಬ್ರಿಟಿಷರು ಭಾರತೀಯ ಕೃತಿಗಳನ್ನು ಭಾಷಾಂತರ ಮಾಡುವ ಮೂಲಕ ಇಲ್ಲಿಯ ಆಡಳಿತ, ಸಂಸ್ಕೃತಿ, ಪರಂಪರೆಯನ್ನು ತಿಳಿದು ಅದನ್ನು ದಾಖಲೀಕರಣ ಮಾಡಿದರು. ಜತೆಗೆ ಆಡಳಿತ ದೃಷ್ಟಿಯಿಂದ ಇಂಗ್ಲಿಷ್ ಶಿಕ್ಷಣದ ಮೂಲಕ ತಮ್ಮ ಭಾಷೆಯನ್ನು ಬಿತ್ತಿದರು ಎಂದರು.
ಡಾ.ಸರ್ವೆಪಲ್ಲಿ ರಾಧಾಕೃಷ್ಣನ್ ಅವರು ತಮ್ಮ ಬರವಣಿಗೆ ಮೂಲಕ ದೇಶದ ಶ್ರೇಷ್ಠತೆ ಏನು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಅವರು ಬರವಣಿಗೆಯ ಮೂಲಕ ರಾಷ್ಟ್ರೀಯತೆಯ ಕೆಲಸ ಮಾಡಿದ್ದಾರೆ. ಆದರೆ ರಾಷ್ಟ್ರೀಯತೆಯ ವಿಚಾರವಾಗಿ ಕಾರ್ಯ ನಿರ್ವಹಿಸಿಲ್ಲ. ಹೀಗಾಗಿ ಪ್ರಧಾನಿ ಹುದ್ದೆ ತಪ್ಪಿತ್ತು ಎಂಬ ವಾದವೂ ಇದೆ ಎಂದು ಹೇಳಿದರು.
ಭಾರತೀಯ ಶಿಕ್ಷಣ ವ್ಯವಸ್ಥೆಗೆ ಮೈಸೂರು ವಿಶ್ವವಿದ್ಯಾಲಯದ ಕೊಡುಗೆಯೂ ಅಪಾರವಾಗಿದೆ. ವಿವಿಧ ಕಾಲಘಟ್ಟದಲ್ಲಿ ವಿಭಿನ್ನವಾಗಿ ಕಾರ್ಯನಿರ್ವಹಿಸಿವೆ. ಪ್ರಸ್ತುತ ಮೈಸೂರು ವಿವಿ ಮಾಡಿರುವ ಕಾರ್ಯವನ್ನು ಜನರಿಗೆ ತಿಳಿಸುವ ಕಾರ್ಯವಾಗಬೇಕಿದೆ ಎಂದು ಅಭಿಪ್ರಾಯಪಟ್ಟರು.
ಮೈಸೂರು ವಿಶ್ವವಿದ್ಯಾಲಯ ಕುಲಸಚಿವೆ ವಿ.ಆರ್.ಶೈಲಜಾ, ಪರೀಕ್ಷಾಂಗ ಕುಲಸಚಿವ ಪ್ರೊ.ಕೆ.ಎಂ.ಮಹಾದೇವನ್, ವಿವಿಧ ವಿಭಾಗದ ಮುಖ್ಯಸ್ಥರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net