ಇಂಗ್ಲಿಷ್ ವ್ಯಾಮೋಹ ಬಿಡಿ

TKE kann
ತರೀಕೆರೆಯಲ್ಲಿ ನುಡಿ ಸಂಭ್ರಮ ಕಾರ್ಯಕ್ರಮವನ್ನು ಲೇಖಕಿ ಡಾ. ನಾಗಜ್ಯೋತಿ ಉದ್ಘಾಟಿಸಿದರು. ರವಿ ದಳವಾಯಿ, ತ.ಮ.ದೇವಾನಂದ್, ಶಾಂತಾ, ಉಮಾ ಇತರರಿದ್ದರು.
Published on

ತರೀಕೆರೆ: ಪಟ್ಟಣ ಪ್ರದೇಶದ ಪಾಲಕರಲ್ಲಿ ಹೆಚ್ಚುತ್ತಿರುವ ಇಂಗ್ಲಿಷ್ ವ್ಯಾಮೋಹದಿಂದ ಕನ್ನಡದ ಅಸ್ತಿತ್ವಕ್ಕೆ ಧಕ್ಕೆ ಬಂದಿದೆ ಎಂದು ಪಟ್ಟಣದ ಶಾರದಾ ಸತ್ಸಂಗದ ಅಧ್ಯಕ್ಷೆ ಶಾಂತಾ ಹೇಳಿದರು.

ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಹಾಗೂ ತಾಲೂಕು ಕಸಪಾ ಮಹಿಳಾ ಘಟಕದ ಸಹಯೋಗದಲ್ಲಿ ಏರ್ಪಡಿಸಿದ್ದ ಸುವರ್ಣ ನುಡಿ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಭಾಷೆ ಬೆಳವಣಿಗೆಯಿಂದ ನಾಡಿನ ಶ್ರೇಯೋಭಿವೃದ್ಧಿ ಮಾತ್ರವಲ್ಲ, ಕನ್ನಡಿಗರ ವೈಯಕ್ತಿಕ ಪ್ರಗತಿ ಕೂಡ ಸುಲಭವಾಗಲಿದೆ. ಈ ನೆಲದಲ್ಲಿ ಹುಟ್ಟಿರುವ ಪ್ರತಿಯೊಬ್ಬರು ನಾಡು, ನುಡಿ ರಕ್ಷಣೆ ಜತೆ ನಮ್ಮತನ ಕಾಪಾಡಿಕೊಳ್ಳಬೇಕು ಎಂದರು.

ಲೇಖಕಿ ಡಾ. ನಾಗಜ್ಯೋತಿ ಅಂದು-ಇಂದಿನ ಮಹಿಳಾ ಸಾಹಿತ್ಯದ ತುಲನಾತ್ಮಕ ಚಿಂತನೆ ವಿಷಯ ಕುರಿತು ಉಪನ್ಯಾಸ ನೀಡಿದರು. ರಿಯಾಲಿಟಿ ಶೋ ರನ್ನರ್ ಅಪ್ ಟಿ.ಎಸ್.ಧನ್ಯಶ್ರೀಗೆ ಪ್ರಕೃತಿಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು.

ತಾಲೂಕು ಕಸಾಪ ಅಧ್ಯಕ್ಷ ರವಿ ದಳವಾಯಿ, ಪ್ರಧಾನ ಕಾರ್ಯದರ್ಶಿ ತ.ಮ.ದೇವಾನಂದ್, ಗಾಯಕಿ ಉಮಾ, ಗಾಯಕ ಮಂಜುನಾಥ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net