ಇಂಗ್ಲಿಷ್ ಪರೀಕ್ಷೆ ಸುಸೂತ್ರ

18KWR4B
Published on

ಕಾರವಾರ: ಕರೊನಾ ಕಾರಣದಿಂದ ಬಾಕಿ ಉಳಿದಿದ್ದ ದ್ವಿತೀಯ ಪಿಯುಸಿ ಇಂಗ್ಲಿಷ್ ಪರೀಕ್ಷೆಯನ್ನು ಗುರುವಾರ ಜಿಲ್ಲೆಯಲ್ಲಿ ಗೊಂದಲವಿಲ್ಲದೇ ಯಶಸ್ವಿಯಾಗಿ ನಡೆಸಲಾಗಿದೆ.

ಧೋ ಎಂದು ಸುರಿಯುವ ಮಳೆ, ಕರೊನಾ ಆತಂಕದ ನಡುವೆಯೂ ಬಹುತೇಕ ವಿದ್ಯಾರ್ಥಿಗಳು ಹಾಜರಾಗಿ ಪರೀಕ್ಷೆ ಬರೆದಿದ್ದಾರೆ.

ಜಿಲ್ಲೆಯಲ್ಲಿ ವಿವಿಧ ಗ್ರಾಮಗಳಿಂದ ವಿದ್ಯಾರ್ಥಿಗಳಿಗಾಗಿ 100 ಕ್ಕೂ ಅಧಿಕ ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿತ್ತು. ಇನ್ನೂ ಹಲವು ವಿದ್ಯಾರ್ಥಿಗಳನ್ನು ಸ್ವತಃ ಪಾಲಕರು ಬಂದು ಬಿಟ್ಟು ಹೋಗಿರುವುದು ಕಂಡು ಬಂತು. ಎಲ್ಲ ಕೇಂದ್ರಗಳಲ್ಲಿ ವಿದ್ಯಾರ್ಥಿಗಳಿಗೆ ಹ್ಯಾಂಡ್ ಸ್ಯಾನಿಟೈಸರ್ ಹಾಕಿ ಪ್ರವೇಶಕ್ಕೆ ಅವಕಾಶ ನೀಡಲಾಯಿತು. ಥರ್ಮಲ್ ಸ್ಕ್ರೀನಿಂಗ್ ನಡೆಸಲಾಯಿತು.

ಹೊರ ರಾಜ್ಯದಿಂದ ಕಾರವಾರಕ್ಕೆ 4 ಅಂಕೋಲಾಕ್ಕೆ 6 ವಿದ್ಯಾರ್ಥಿಗಳು ಬರಬೇಕಿದ್ದು, ಎಲ್ಲರೂ ಬಂದು ಪರೀಕ್ಷೆ ಬರೆದಿದ್ದಾರೆ. ಹೊರ ಜಿಲ್ಲೆಗಳಿಂದ ಬಂದು ಪರೀಕ್ಷೆ ಬರೆಯಲು 595 ಅಭ್ಯರ್ಥಿಗಳಳು ಹೆಸರು ನೋಂದಾಯಿಸಿಕೊಂಡಿದ್ದು, ಅವರಲ್ಲಿ ಕಾರವಾರದ 16, ಹೊನ್ನಾವರ, ಭಟ್ಕಳ, ಹಳಿಯಾಳದ ತಲಾ ಒಬ್ಬ ವಿದ್ಯಾರ್ಥಿ ಹಾಗೂ ಶಿರಸಿಯಲ್ಲಿ ಇಬ್ಬರು ಗೈರಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net