ಇ-ಸ್ವತ್ತು ವಿತರಣೆಗೆ ಒತ್ತಾಯಿಸಿ ಪ್ರತಿಭಟನೆ

CTD STRIKE
filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (0.6813492, 0.3375);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 46;
Published on


ಚಿತ್ರದುರ್ಗ: ನಗರ ವ್ಯಾಪ್ತಿಯ ಗ್ರಾಪಂಗಳು, 2 ವರ್ಷಗಳ ಹಿಂದೆ 11 ಬಿ.ಖಾತೆ ನಿವೇಶನ ಹಾಗೂ ಮನೆಗಳ ಇ-ಸ್ವತ್ತು ಕಡತಗಳನ್ನು ವರ್ಗಾಯಿಸಿ ದ್ದರೂ ಈವರೆಗೂ ನಗರಸಭೆ, ಈ ನಿವೇಶನ-ಮನೆಗಳಿಗೆ ಇ-ಸ್ವತ್ತು ನೀಡದಿರುವುದನ್ನು ವಿರೋಧಿಸಿ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾ ಣ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ಮಂಗಳವಾರ ನಗರಸಭೆ ಎದುರು ಪ್ರತಿಭಟಿಸಿದರು.
ಇ-ಸ್ವತ್ತಿಗಾಗಿ ನಗರಸಭೆಗೆ ನಾಗರಿಕರು ಅಲೆದಾಡಿ ಸಾಕಾಗಿದ್ದಾರೆ. ಇ-ಸ್ವತ್ತು ಇಲ್ಲದಿದ್ದರೆ ನಿವೇಶನಗಳಿಗೆ ಸಾಲ ಸೌಲಭ್ಯ ಸಿಗದು. ರಾಜ್ಯ ದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಂದಿನಿಂದ ಕಚೇರಿಗಳಲ್ಲಿ ಸಾರ್ವಜನಿಕರ ಕೆಲಸಗಳು ವಿಳಂಬವಾಗುತ್ತಿವೆ ಎಂದು ಪ್ರತಿಭಟನಾಕಾರರು ಆಪಾದಿಸಿದರು. ಕೂಡಲೇ ಇ-ಸ್ವತ್ತು ವಿತರಿಸುವಂತೆ ಒತ್ತಾಯಿಸಿ ನಗರಸಭೆ ವ್ಯವಸ್ಥಾಪಕಿ ಮಂಜುಳಾ ಅವರಿಗೆ ಮನವಿ ಸಲ್ಲಿಸಿದರು.
ರಾಜ್ಯಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಮೇಲಿನ ದೌರ್ಜನ್ಯ, ಸುಳ್ಳು ಜಾತಿ ಪ್ರಮಾಣಪತ್ರ ಪ್ರಕರಣ, ಜ ಮೀನು ವಿವಾದ, ಮೀಸಲು ಮತ್ತಿತರ ಪ್ರಕರಣಗಳಿಗೆ ಸಂಬಂಧಿಸಿದಂತೆ ಎಸ್ಸಿ, ಎಸ್ಟಿಗಳಿಗೆ ಸಾಮಾಜಿಕ ನ್ಯಾಯ ಒದಗಿಸಲು ಆಯೋಗಕ್ಕೆ ಅಧ್ಯಕ್ಷರನ್ನು ನೇಮಿಸಬೇಕು. ರಾಜ್ಯದಲ್ಲಿ ಬಾಕಿ ಇರುವ 1727 ಪ್ರಕರಣಗಳ ಇತ್ಯರ್ಥಗೊಳಿಸಬೇಕೆಂದು ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿಗೆ ಪ್ರತ್ಯೇಕವಾಗಿ ಮನವಿ ಸಲ್ಲಿಸಿದರು.
ರಾಜ್ಯಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕ್ಷೇಮಾಭಿವೃದ್ದಿ ಸಂಘ ಅಧ್ಯಕ್ಷ ಜೆ.ಮಂಜುನಾಥ್, ಪ್ರಧಾನ ಕಾರ‌್ಯದರ್ಶಿ ವೈ.ಕು ಮಾರ್, ಕೆ.ಗೌಸ್‌ಪೀರ್, ಎಂ.ಆರ್.ನರಸಿಂಹಸ್ವಾಮಿ, ಡಿ.ಈಶ್ವರಪ್ಪ, ಚಾಂದ್‌ಪೀರ್, ಇಮಾಂ ಮೈಹಿಮುದ್ದೀನ್, ಪ್ರಸನ್ನ, ರಾಜಪ್ಪ, ಗೌಸ್ ಖಾನ್, ರಫೀಕ್, ರಾಜಣ್ಣ, ಸಲೀಂ, ಇಬಾದುಲ್ಲಾ, ಎಂ.ತಿಮ್ಮಯ್ಯ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net