

ಚಿಕ್ಕೋಡಿ: ಕಂಕಣವಾಡಿ ಬೀರೇಶ್ವರ ಸಹಕಾರಿಯ ಶಾಖೆಯಲ್ಲಿ ಇ-ಸ್ಟ್ಯಾಂಪ್ ಸೇವೆ ಪ್ರಾರಂಭಿಸಿ ಗ್ರಾಹಕರಿಗೆ ಅನುಕೂಲ ಕಲ್ಪಿಸಿರುವ ಯಕ್ಸಂಬಾದ ಅಣ್ಣಾಸಾಹೇಬ ಜೊಲ್ಲೆ ಹಾಗೂ ಅವರ ಸಹಕಾರಿಗಳಿಗೆ ಅಭಿನಂದನೆ ಎಂದು ಬಿಜೆಪಿ ಧುರೀಣ ರಾಜಶೇಖರ ಖನದಾಳೆ ಹೇಳಿದರು.
ಕಂಕನವಾಡಿ ಗ್ರಾಮದಲ್ಲಿ ಯಕ್ಸಂಬಾ ಬೀರೇಶ್ವರ ಕೋ-ಆಫ್ ಕ್ರೆಡಿಟ್ ಸೊಸೈಟಿ ಶಾಖೆಯಲ್ಲಿ ಇ-ಸ್ಟ್ಯಾಂಪ್ (ಬಾಂಡ್ ಪೇಪರ್) ಸೇವೆಗೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದರು.
ಶಾಖಾ ವ್ಯವಸ್ಥಾಪಕ ಶ್ರೀಶೈಲ ಹೊಸಟ್ಟಿ, ಅಪ್ಪಾಸಾಹೇಬ ಬ್ಯಾಕೂಡ, ಎಚ್.ಎಸ್.ಹುಕ್ಕೇರಿ, ಚೇತನ ಕರಣಿ, ಶಿವಬಸು ಚೌಗಲಾ, ಶ್ರೀನಾಥ ಪೋತದಾರ, ಸಿದ್ರಾಮ ಪೂಜೇರಿ, ಬಾಳಪ್ಪ ಪೂಜೇರಿ, ನಿಂಗಪ್ಪ ಪಕಾಂಡಿ, ಶ್ರೀಶೈಲ ಮೂಡಲಗಿ, ಕೆಂಪ್ಪಣ್ಣ ಮೋಳವಾಡ, ಮಲಕಾರಿ ಸಂಕ್ರಟ್ಟಿ, ಮಹೇಶ ಬಾಲದಂಡಿ ಇತರರಿದ್ದರು.