ಇ ಸ್ಟ್ಯಾಂಪಿಂಗ್ ಸೌಲಭ್ಯಕ್ಕೆ ಚಿಂತನೆ

20tnpnewsfile01
ತಿ.ನರಸೀಪುರ ಪಟ್ಟಣದ ವೀರಶೈವ ವಿದ್ಯಾರ್ಥಿ ನಿಲಯದಲ್ಲಿ ನಡೆದ ಸ್ಫಟಿಕ ವಿವಿಧೋದ್ದೇಶ ಸೌಹಾರ್ಧ ಸಹಕಾರಿ ನಿಯಮಿತ ವಾರ್ಷಿಕ ಮಹಾಸಭೆಯಲ್ಲಿ ಸಂಘದ ಅಧ್ಯಕ್ಷ ಜಿ.ರಾಜೇಶ್ ಮಾತನಾಡಿದರು.
Published on

ತಿ.ನರಸೀಪುರ: ಸಹಕಾರ ಸಂಘದ ವತಿಯಿಂದ ಇ-ಸ್ಟ್ಯಾಂಪಿಂಗ್ ಸೌಲಭ್ಯ ಕಲ್ಪಿಸಲು ಚಿಂತನೆ ನಡೆಸಲಾಗಿದೆ ಎಂದು ಸ್ಫಟಿಕ ವಿವಿಧೋದ್ದೇಶ ಸೌಹಾರ್ದ ಸಹಕಾರ ಸಂಘ ನಿಯಮಿತ ಅಧ್ಯಕ್ಷ ಜಿ.ರಾಜೇಶ್ ಹೇಳಿದರು.

ಪಟ್ಟಣದ ವಿವೇಕಾನಂದ ನಗರದಲ್ಲಿರುವ ವೀರಶೈವ ಮಹಾಸಭಾ ವಿದ್ಯಾರ್ಥಿ ನಿಲಯದಲ್ಲಿ ಏರ್ಪಡಿಸಲಾಗಿದ್ದ ಸಂಘದ ಸರ್ವ ಸದಸ್ಯರ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸದಸ್ಯರ ಸಹಕಾರದಿಂದ ಸಂಘವು ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ಕೆಲವು ಸದಸ್ಯರು ಸುಸ್ತಿದಾರರಾಗಿರುವುದರಿಂದ ಈ ಸಾಲಿನಲ್ಲಿ ಕಡಿಮೆ ಲಾಭಾಂಶ ಪಡೆದುಕೊಂಡಿದೆ. ಸದಸ್ಯರು ಪಡೆದ ಸಾಲವನ್ನು ಪ್ರಾಮಾಣಿಕವಾಗಿ ಮರುಪಾವತಿ ಮಾಡಿ ಸಂಘದ ಬೆಳವಣಿಗೆಗೆ ಸಹಕಾರ ನೀಡುವಂತೆ ಅವರು ಮನವಿ ಮಾಡಿದರು.

ಮುಂದಿನ ಸಾಲಿನಿಂದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುತ್ತದೆ. ಸಂಘವನ್ನು ಆರ್ಥಿಕವಾಗಿ ಬಲಗೊಳಿಸಲು ಸಂಘದ ಸದಸ್ಯರೊಡಗೂಡಿ ಹಳ್ಳಿಗಳ ಪ್ರವಾಸ ಕೈಗೊಂಡು ಹೆಚ್ಚಿನ ಠೇವಣಿ ಶೇಖರಣೆ ಮಾಡಲಾಗುತ್ತದೆ ಎಂದು ತಿಳಿಸಿದರು.

ಸಂಘದ ಕಾರ್ಯನಿರ್ವಹಣಾಧಿಕಾರಿ ಸಿಎಸ್.ಪಂಕಜ ವಾರ್ಷಿಕ ವರದಿ ಮಂಡಿಸಿದರು. ಸಭೆಯಲ್ಲಿ ಉಪಾಧ್ಯಕ್ಷೆ ಸೌಮ್ಯರಾಜಬುದ್ಧಿ,ನಿರ್ದೇಶಕರಾದ ಪರಶಿವ ಮೂರ್ತಿ, ಎಂ.ವಿ.ಮಹದೇವ ಸ್ವಾಮಿ, ತೊಂಟೇಶ್, ಮಹದೇವಸ್ವಾಮಿ, ಷಡಕ್ಷರಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net