ಇ-ಲೋಕ ಅದಾಲತ್, 4475 ಪ್ರಕರಣ ಇತ್ಯರ್ಥ

19 vikram 4
Published on

ಧಾರವಾಡ: ಜಿಲ್ಲೆಯ ಎಲ್ಲ ನ್ಯಾಯಾಲಯಗಳಲ್ಲಿ ಇ- ಲೋಕ ಅದಾಲತ್​ಅನ್ನು ವಿಡಿಯೋ ಕಾನ್ಪ ರೆನ್ಸ್ ಮೂಲಕ ಶನಿವಾರ ನಡೆಸಲಾಯಿತು.

ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಉಮೇಶ ಅಡಿಗ ಮಾರ್ಗದರ್ಶನದಲ್ಲಿ ಧಾರವಾಡದಲ್ಲಿ 13 ಪೀಠಗಳನ್ನು, ಹುಬ್ಬಳ್ಳಿಯಲ್ಲಿ 16 ಪೀಠಗಳನ್ನು, ಕುಂದಗೋಳ, ನವಲ ಗುಂದ ಮತ್ತು ಕಲಘಟಗಿಯಲ್ಲಿ ತಲಾ 2 ಪೀಠಗಳನ್ನು ಸ್ಥಾಪಿಸಲಾಗಿತ್ತು. ವಿವಿಧ ರೀತಿಯ 7,645ಕ್ಕಿಂತ ಹೆಚ್ಚು ಪ್ರಕರಣಗಳನ್ನು ತೆಗೆದುಕೊಂಡು ಅವುಗಳ ಪೈಕಿ 4,475 ಚಾಲ್ತಿ ಇರುವ ಪ್ರಕರಣ ಗಳನ್ನು ಹಾಗೂ 10 ವ್ಯಾಜ್ಯ ಪೂರ್ವ ಪ್ರಕರಣಗಳನ್ನು ರಾಜೀ ಸಂಧಾನ ಮಾಡಿಸ ಲಾಯಿತು. 25 ಕೋಟಿ ರೂ.ಗಿಂತ ಹೆಚ್ಚು ಮೊತ್ತ ವಸೂಲು ಮಾಡಲಾಯಿತು.ಜಿಲ್ಲೆಯ ಎಲ್ಲ ನ್ಯಾಯಾಧೀಶರು, ವಿವಿಧ ವಿಮೆ ಕಂಪನಿ ಅಧಿಕಾರಿಗಳು, ವಿಮೆ ಕಂಪನಿ ಪ್ಯಾನಲ್ ವಕೀಲರು, ಅರ್ಜಿದಾರ ಪರ ವಕೀಲರು, ಕಕ್ಷಿದಾರರು ವಿಡಿಯೋ ಕಾನ್ಪರೆನ್ಸ್ ಮೂಲಕ ಭಾಗವಹಿಸಿ ಇ ಲೋಕ ಅದಾಲತ್​ಅನ್ನು ಯಶಸ್ವಿಗೊಳಿಸಿ ದ್ದಾರೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಆರ್.ಎಸ್. ಚಿಣ್ಣನ್ನವರ್ ತಿಳಿಸಿದ್ದಾರೆ.

ಹೈಕೋರ್ಟ್: ಇಲ್ಲಿನ ಕರ್ನಾಟಕ ಉಚ್ಚ ನ್ಯಾಯಾಲಯ ಪೀಠದಲ್ಲಿ ನಡೆಸಿದ ರಾಷ್ಟ್ರೀಯ ಇ-ಲೋಕ ಅದಾಲತ್​ನಲ್ಲಿ ನ್ಯಾಯಮೂರ್ತಿಗಳಾದ ಎಸ್.ಆರ್. ಕೃಷ್ಣಕುಮಾರ್, ಸೂರಜ್ ಗೋವಿಂದ ರಾಜ್, ಎಸ್. ವಿಶ್ವಜಿತ್ ಶೆಟ್ಟಿ, ಎಸ್.ಬಿ. ಅಮರಣ್ಣವರ್, ಎಂ.ಜಿ. ಉಮಾ, ಲೋಕ ಅದಾಲತ್ ಸದಸ್ಯರಾದ ಎಲ್.ಟಿ. ಮಂಟಗಣಿ, ಜೆ.ಎಸ್. ಶೆಟ್ಟಿ, ಎಂ.ಸಿ. ಹುಕ್ಕೇರಿ, ಎಸ್.ಎಸ್. ಬಡವಡಗಿ ಮತ್ತು ಸುನಂದಾ ಪಾಟೀಲ ಪಾಲ್ಗೊಂಡಿದ್ದರು.

ಅದಾಲತ್​ನಲ್ಲಿ ಒಟ್ಟು 476 ಪ್ರಕರಣ ಗಳನ್ನು ವಿಚಾರಣೆಗೆ ಗುರುತಿಸಿ, ಒಟ್ಟು 323 ಪ್ರಕರಣಗಳನ್ನು 5,61,34,000 ರೂ.ಗೆ ಇತ್ಯರ್ಥಪಡಿಸಲಾಯಿತು ಎಂದು ಅಧಿಕ ವಿಲೇಖನಾಧಿಕಾರಿ ರೋಣ ವಾಸುದೇವ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net