‘ಇ-ಖಾತೆ’ ಸದುಪಯೋಗಕ್ಕೆ ಜಿಲ್ಲಾಧಿಕಾರಿ ಮನವಿ

CTD 0008
Published on

ಚಿತ್ರದುರ್ಗ: ಜಿಲ್ಲೆಯ ಎಲ್ಲ ನಗರಸಭೆ,ಪುರಸಭೆ ಹಾಗೂ ಪಪಂ ವ್ಯಾಪ್ತಿಯಲ್ಲಿರುವ,ಆದರೆ ಈವರೆಗೂ ಇ-ಖಾತೆ ಪಡೆಯದೇ ಇರುವ ಕಟ್ಟಡ ಮ ತ್ತು ನಿವೇಶನಗಳ ಮಾಲೀಕರು ಮೇ10ರೊಳಗೆ ಬಿ.ರಿಜಿಸ್ಟರ್‌ನಲ್ಲಿ ನಮೂದಿಸಿಕೊಂಡು,ಇ-ಖಾತೆ ಪಡೆಯುವಂತೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಮನವಿ ಮಾಡಿದ್ದಾರೆ.

ಎ ರಿಜಿಸ್ಟರ್‌ನಲ್ಲಿ ಅಂದರೆ ಸಕ್ಷಮ ಪ್ರಾಧಿಕಾರದಿಂದ ಅನುಮೋದನೆ ಪಡೆದ ಬಡಾವಣೆಗಳ ಸ್ವತ್ತುಗಳಿಗೆ ಇ-ಖಾತೆ ನೀಡಲಾಗುತ್ತದೆ. ಆದರೆ,ಭೂ ಪರಿವರ್ತನೆಯಾಗದೇ ಉಪ-ವಿಭಜನೆ ಮಾಡಿ ನಿವೇಶನಗಳಾಗಿ ಮಾರಾಟ ಮಾಡಿರುವ ನಿವೇಶನ,ಕಟ್ಟಡಗಳು ಮತ್ತು ಭೂ ಪರಿವರ್ತನೆಯಾಗಿದ್ದು,ಸಕ್ಷಮ ಪ್ರಾಧಿಕಾರದಿಂದ ಅನುಮೋದನೆಯಾಗದ ಬಡಾವಣೆಗಳ ನಿವೇಶನ ಅಥವಾ ಕಟ್ಟಡಗಳಿಗೆ ಬಿ ರಿಜಿಸ್ಟರ್ ನ ಲ್ಲಿ ನಮೂದಿಸಿಕೊಂಡು ಇ-ಖಾತೆ ನೀಡಲಾಗುತ್ತದೆ. ಈ ಅವಕಾಶವನ್ನು ಒಮ್ಮೆ ನೀಡಲಾಗುತ್ತಿದ್ದು,ಕಟ್ಟಡ,ನಿವೇಶನಗಳ ಮಾಲೀಕರು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಕೋರಿದ್ದಾರೆ.

ಬಿ ರಿಜಿಸ್ಟರ್‌ನಲ್ಲಿ ದಾಖಲಿಸುವ ಆಸ್ತಿಗಳಿಗೆ 2024-25ನೇ ಸಾಲಿಗೆ ಮೊದಲ ಬಾರಿಗೆ ಸ್ವತ್ತು ತೆರಿಗೆ ಎರಡರಷ್ಟು ತೆರಿಗೆ ವಿಧಿಸಲಾಗುತ್ತ ದೆ. ನಂತರದ ವರ್ಷಗಳಲ್ಲಿ ಸ್ವತ್ತು ತೆರಿಗೆ ಮಾತ್ರ ವಿಧಿಸಲಾಗುತ್ತದೆ. ಕರ್ನಾಟಕ ಪೌರಸಭೆಗಳ ಅಧಿನಿಯಮ 1964ರ ಪ್ರಕರಣ 106ಕ್ಕೆ ತಂ ದಿರುವ ತಿದ್ದುಪಡಿಯಂತೆ 2024 ಸೆಪ್ಟೆಂಬರ್ 10ರಿಂದ ಜಾರಿಗೆ ಬಂದಿರುವ ನಿಯಮದಂತೆ ತೆರಿಗೆ ವಿಧಿಸಲಾಗುತ್ತದೆ.

ಸರ್ಕಾರಿ ಜಾಗ,ನಿಗಮ ಮಂಡಳಿ ಮತ್ತು ನಗರ ಸ್ಥಳೀಯ ಸಂಸ್ಥೆಗಳಲ್ಲಿನ ಜಾಗಗಳು ಹೊರತುಪಡಿಸಿ ಕಳೆದ ಸೆಪ್ಟೆಂಬರ್ ಪೂರ್ವ ನೋ ಂದಾಯಿತ,ಭೂ ಪರಿವರ್ತನೆಯಾಗದೇ ಉಪ ವಿಭಜನೆಯೊಂದಿಗೆ ನಿವೇಶನಗಳಾಗಿ ಮಾರಾಟವಾದ ನಿವೇಶನ,ಕಟ್ಟಡಗಳು ಮತ್ತು ಭೂ ಪರಿ ವರ್ತನೆಯಾಗಿ ಸಕ್ಷಮ ಪ್ರಾಧಿಕಾರದಿಂದ ಅನುಮೋದನೆಯಾಗದ ಬಡಾವಣೆಗಳಲ್ಲಿನ ನಿವೇಶನ, ಕಟ್ಟಡಗಳಿಗೆ ಬಿ ರಿಜಿ ಸ್ಟರ್‌ನಲ್ಲಿ ನಮೂದಿಸಿ ಇ-ಖಾತೆ ನೀಡಲಾಗುತ್ತದೆ.

ಆದುದರಿಂದ ಈವರೆಗೂ ಇ-ಖಾತೆ ಪಡೆಯದಂಥ ಎಲ್ಲ ಸ್ವತ್ತುಗಳ ಮಾಲೀಕರು ಕೂಡಲೇ ನಗರಸಭೆ,ಪುರಸಭೆ,ಪಪಂ ಕಚೇರಿಗಳಿಗೆ ಭೇಟಿ ನೀಡಿ,ಸಹಾಯವಾಣಿ ಸಂಪರ್ಕಿಸುವುದು ಅಥವಾ ಈ ಕಚೇರಿಗಳಿಂದ ಏರ್ಪಡಿಸುವ ವಾರ್ಡ್‌ವಾರು ಕ್ಯಾಂಪ್‌ಗಳಿಗೆ ಭೇಟಿ ನೀಡಿ ಬಿ ರಿಜಿಸ್ಟರ್‌ನಲ್ಲಿ ಇ-ಖಾತೆಗೆ ಅರ್ಜಿ ಸಲ್ಲಿಸುವಂತೆ ಡಿಸಿ ತಿಳಿಸಿದ್ದಾರೆ.

ಸಹಾಯವಾಣಿ

ಇ-ಖಾತೆಗೆ ಸಂಬಂಧಿಸಿದಂತೆ ಸಹಾಯವಾಣಿ ಸ್ಥಾಪಿಸಲಾಗಿದೆ. ಚಿತ್ರದುರ್ಗ ನಗರಸಭೆ-08194-222401,ಕೆ.ಕಿರಣ್ ಕುಮಾರ್-9606281164.ಚಳ್ಳಕೆರೆ ನಗರಸಭೆ-08195-200093,ಎಸ್.ವೀರಭದ್ರಪ್ಪ-8050551355. ಹಿರಿಯೂರು ನಗರಸಭೆ-08193-29 6220,ಮಲ್ಲಿಕಾರ್ಜುನ ಸ್ವಾಮಿ-9620287514. ಹೊಸದುರ್ಗ ಪುರಸಭೆ- 08199-295095, ಎನ್.ವಿನಯ್-9353833372. ಹೊಳಲ್ಕೆರೆ ಪುರಸಭೆ-08191-275861,ಎಂ.ದೇವರಾಜ್-9845912244. ಮೊಳಕಾಲ್ಮೂರು ಪಪಂ-08198-229044,ಎಲ್. ಎಚ್.ತಿಪ್ಪೇಸ್ವಾಮಿ-9845174196,ನಾಯಕನಹಟ್ಟಿ ಪಪಂ-08190-200232,ಆರ್.ಸಂದೀಪ್-9606307100 ಅವರನ್ನು ಸಂಪ ರ್ಕಿಸ ಬಹುದು.

----

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net