ಇ-ಆಸ್ತಿ ಮೇಳಕ್ಕೆ ಚಾಲನೆ 17ರಂದು

hdmc photo
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಇ-ಆಸ್ತಿ ಹಾಗೂ ಆಸ್ತಿ ತೆರಿಗೆ ಮೇಳ ಎಂಬ ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಜ. 17ರಂದು ಚಾಲನೆ ನೀಡಲಿದೆ.

ಬೆಳಗ್ಗೆ 10.30ಕ್ಕೆ ಇಲ್ಲಿಯ ಪಾಲಿಕೆ ಕೇಂದ್ರ ಕಚೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಚಾಲನೆ ನೀಡುವರು. ಮೇಯರ್ ರಾಮಪ್ಪ ಬಡಿಗೇರಿ, ಉಪ ಮೇಯರ್ ದುರ್ಗಮ್ಮ ಬಿಜವಾಡ, ಪಾಲಿಕೆ ಸದಸ್ಯರು ಪಾಲ್ಗೊಳ್ಳುವರು.

ಫೆಬ್ರುವರಿಯಿಂದ ಪ್ರತಿ ತಿಂಗಳ ಮೊದಲ ಹಾಗೂ ಮೂರನೇ ಶನಿವಾರದಂದು ಎಲ್ಲ 12 ವಲಯ ಕಚೇರಿಗಳಲ್ಲಿ ಬೆಳಗ್ಗೆ 10.30ರಿಂದ ಸಂಜೆ 5.30ರವರೆಗೆ ಇ-ಆಸ್ತಿ ಹಾಗೂ ಆಸ್ತಿ ತೆರಿಗೆ ಮೇಳ ಆಯೋಜಿಸಲಾಗುವುದು. ಎಲ್ಲ ಸ್ವರೂಪದ ಆಸ್ತಿಗಳಿಗೆ ಸಂಬಂಧಿಸಿದ ಇ-ಆಸ್ತಿಯನ್ನು ನಿಗದಿತ ಅವಧಿಯೊಳಗೆ ಸೃಜಿಸಲಾಗುವುದು ಎಂದು ಪಾಲಿಕೆ ಹೇಳಿದೆ.

ಹೊಸದಾಗಿ ರಚನೆಯಾದ ವಸತಿ ವಿನ್ಯಾಸಗಳಲ್ಲಿಯ ಆಸ್ತಿಗಳು, ಆಸ್ತಿ ತೆರಿಗೆ ಜಾಲದಿಂದ ಹೊರಗುಳಿದ ಎಲ್ಲ ಸ್ವರೂಪದ ಆಸ್ತಿಗಳು, ಮಾಲೀಕತ್ವ ಬದಲಾವಣೆ, ಆಸ್ತಿಗಳಲ್ಲಿನ ಲೋಪದೋಷಗಳ ತಿದ್ದುಪಡಿಗೆ ಮೇಳದಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net