ಆಹಾರ ಸುರಕ್ಷತೆಗೆ ಆದ್ಯತೆ ನೀಡಿ

14 YERRISWAMY 04
Published on

ಬಳ್ಳಾರಿ : ಆಹಾರ ಮತ್ತು ಪದಾರ್ಥಗಳ ತಯಾರಿಕೆಯಲ್ಲಿ ಸುರಕ್ಷತೆ ಮತ್ತು ಗುಣಮಟ್ಟ ಕಾಪಾಡಿಕೊಳ್ಳಬೇಕು ಎಂದು ಆಹಾರ ಸುರಕ್ಷತಾ ಅಧಿಕಾರಿ ನಂದಾಕಡಿ ಹೇಳಿದರು.
ನಗರ ಬಿಡಿಸಿಸಿ ಸಂಸ್ಥೆ ಸಭಾಂಗಣದಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಮತ್ತು ಜಿಲ್ಲಾ ಹೋಟೆಲ್ ಮಾಲೀಕರ ಅಸೋಸಿಯೇಷನ್ ಸಹಯೋಗದೊಂದಿಗೆ ನಡೆದ ಆಹಾರ ನೋಂದಣಿ, ಪರವಾನಿಗೆ ಅಂದೋಲನ ಹಾಗೂ ಆಹಾರ ಸುರಕ್ಷತೆಯ ಕುರಿತು ಎಲ್ಲ ಉದ್ದಿಮೆದಾರರಿಗೆ, ಸಾರ್ವಜನಿಕರಿಗೆ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು. ಸೇವನೆಗೆ ಯೋಗ್ಯವಾದ ಆಹಾರ ತಯಾರಿಕೆಗೆ ಆದ್ಯತೆ ನೀಡಬೇಕು. ಆಹಾರ ಗುಣಮಟ್ಟ ಕಾಪಾಡಿಕೊಳ್ಳುವ ಕಾಯ್ದೆಯು ಜನಪರವಾಗಿದೆ. ಎಲ್ಲ ರೀತಿಯ ಆಹಾರ ಪದಾರ್ಥಗಳ ಆಹಾರ ವಸ್ತುಗಳ ಉತ್ಪಾದಕರು, ಸಾಗಣೆದಾರರು, ಆಹಾರ ಸಂಸ್ಕರಣೆ ಮಾಡುವವರು, ವಿತರಕರು, ಹೋಟೆಲ್, ರೆಸಾರ್ಟ, ಕ್ಯಾಂಟೀನ್, ಮೊಬೈಲ್ ವ್ಯವಸ್ಥೆಯಲ್ಲಿ ಆಹಾರ ಮಾರಾಟಗಾರರು, ವೈನ್ ಸ್ಟೋರ್, ಕ್ಲಬ್‌ಗಳು, ಬಾರ್ ಅಂಡ್ ರೆಸ್ಟೋರೆಂಟ್, ಬೇಕರಿ, ಸಿಹಿತಿಂಡಿ, ಹಾಲು, ಹಾಲಿನ ಉತ್ಪನ್ನ, ಪ್ಯಾಕೇಜ್ ಕುಡಿಯುವ ನೀರು ಘಟಕ ಇನ್ನಿತರರು ಆಹಾರ ಸುರಕ್ಷತೆಗೆ ಆದ್ಯತೆ ನೀಡಬೇಕು ಎಂದರು.
ವಿವಿಧ ಹೋಟೆಲ್‌ಗಳ ಪದಾಧಿಕಾರಿಗಳು, ಜನರಲ್ ಮ್ಯಾನೇಜರ್‌ಗಳು ಗುಣಮಟ್ಟದ ಆಹಾರ ಸಿದ್ದಪಡಿಸುವಿಕೆಗೆ ಪ್ರಥಮ ಆದ್ಯತೆ ನೀಡಲಾಗುವುದು ಎಂದು ಕಾರ್ಯಕ್ರಮದಲ್ಲಿ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net