ಆಹಾರ ಸುರಕ್ಷತೆ,ಆಂದೋಲನಕ್ಕೆ ಡಿಸಿ ಸೂಚನೆ

ctd DC-----02
Published on

ಚಿತ್ರದುರ್ಗ: ಜಿಲ್ಲಾದ್ಯಂತ ಆಹಾರ ಸುರಕ್ಷತೆ ಕುರಿತ ಆಂದೋಲನ ನಡೆಸುವಂತೆ ಜಿಲ್ಲಾಧಿಕಾರಿ ಜಿಆರ್‌ಜೆ ದಿವ್ಯಾಪ್ರಭು ಅವರು ಅಧಿಕಾರಿಗಳಿಗೆ ಸೂ ಚಿಸಿದರು. ಡಿಸಿ ಕಚೇರಿಯಲ್ಲಿ ಈಚೆಗೆ ನಡೆದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಜಿಲ್ಲಾಮಟ್ಟದ ಸಲಹಾ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು,ಟ್ರೇಡ್‌ಲೈಸನ್ಸ್ ನೀಡುವಾಗ ಊಖಖಅಐ(ಆಹಾರ ಸುರಕ್ಷತಾ ಗುಣಮಟ್ಟ ಇಲಾಖೆ)ಲೈಸೆನ್ಸ್ ಪಡೆದಿದ್ದಾರೆಯೆ ಎಂ ಬುದನ್ನು ಗಮನಿಸಿ ನಂತರ ವಾಣಿಜ್ಯಪರವಾನಗಿ ನೀಡುವಂತೆ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳಿಗೆ ಸೂಚಿಸಿದರು.
ನೋಂದಣಿ ಮಾಡಿಕೊಳ್ಳದೆ,ಅನೈರ್ಮಲ್ಯದ ವಾತಾವರಣದಲ್ಲಿ ವ್ಯಾಪಾರ ನಡೆಸುತ್ತಿರುವ ಬೀದಿಬದಿ ವ್ಯಾಪಾರಿಗಳ ವಿರುದ್ಧವೂ ಕ್ರಮ ವಹಿಸ ಬೇಕೆಂದರು. ಆಹಾರ ಪದಾರ್ಥಗಳ ಮಾರಾಟಗಾರರು,ತಯಾರಕರು,ಸಗಟು,ಚಿಲ್ಲರೆ ವ್ಯಾಪಾರಸ್ಥರು,ಬೀದಿಬದಿ ವ್ಯಾಪಾರಿಗಳು, ಆಹಾರ ಸುರಕ್ಷತೆ ಕಾಯ್ದೆಯಡಿ ನೋಂದಣಿ ಹಾಗೂ ಪರವಾನಗಿ ಪಡೆಯುವುದು ಕಡ್ಡಾಯವಾಗಿದೆ ಎಂದರು.
ದವಸ ಧಾನ್ಯ,ತರಕಾರಿ,ಮಾಂಸ,ಕೋಳಿ,ಮೊಟ್ಟೆ,ಹಾಲು,ಬೀದಿ ಬದಿ ವ್ಯಾಪಾರಿ,ನೀರಿನ ವ್ಯಾಪಾರ,ಬೇಕರಿ,ಹೋಟೆಲ್,ಸಿಹಿತಿಂಡಿ ಅ ಂಗಡಿ,ಆಹಾರ ಪದಾರ್ಥಪ್ಯಾಕ್ ಮಾಡಿ ಮಾರುವವರು,ಸರ್ಕಾರಿ,ಅರೆ ಸರ್ಕಾರಿ ಶಾಲೆ,ಹಾಸ್ಟೆಲ್‌ಗಳಲ್ಲಿ ಅಡುಗೆ ತಯಾರಿಸುವವರು,ಬೆಲ್ಲ,ಅಡುಗೆ ಎಣ್ಣೆ ವ್ಯಾಪಾರಿ,ಬೇಳೆ ಇತ್ಯಾದಿ ಆಹಾರ ಪದಾರ್ಥಗಳ ವ್ಯಾಪಾರಸ್ಥರು ಈ ಕಾಯ್ದೆ ವ್ಯಾಪ್ತಿಗೆ ಬರುತ್ತಾರೆ ಎಂದರು.
ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಅಂಕಿತಾಧಿಕಾರಿ ಡಾ.ಸಿ.ಎಲ್.ಫಾಲಾಕ್ಷ,ಆಹಾರ ಮತ್ತು ನಾಗರಿಕ ಸರಬರಾಜು ಇಲಾ ಖೆ ಜಂಟಿ ನಿರ್ದೇಶಕ ಮಧುಸೂದನ್,ಕೈಗಾರಿಕೆ ಮತ್ತು ವಾಣಿಜ್ಯಇಲಾಖೆ ಉಪನಿರ್ದೇಶಕ ಬಿ.ಕೆ.ಮಂಜುನಾಥಸ್ವಾಮಿ,ವರ್ತಕರ ಸಂಘ ದ ಪ್ರಮುಖ ಸುಬ್ರಮಣ್ಯ,ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕ ಎಂ.ಮಹೇಂದ್ರಕುಮಾರ್,ಅಕ್ಷರ ದಾಸೋಹ ಶಿಕ್ಷಣಾಧಿಕಾರಿ ಜ್ಞಾನೇಶ್ವರಿ,ಆಹಾರ ಸುರಕ್ಷತಾಧಿಕಾರಿಗಳಾದ ತಿರುಮಲೇಶ್,ಚಿದಾನಂದಪ್ಪ,ನಂದಿನಿಕಡಿ,ಮಂಜುನಾಥ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net