ಆಹಾರ ಸುರಕ್ಷತೆ, 52 ವ್ಯಾಪಾರಿಗಳಿಗೆ ನೋಟಿಸ್

CTD NOTICE
Published on

ಚಿತ್ರದುರ್ಗ: ಆಹಾರ ಸುರಕ್ಷತೆ ಆಂದೋಲನದ ಅಂಗವಾಗಿ ಜಿಲ್ಲೆಯ ವಿವಿಧೆಡೆ 95 ಹೋಟೆಲ್,ಬೇಕರಿ, ರೆಸ್ಟೋರೆಂಟ್, ಬೀದಿ ಬದಿ ವ್ಯಾಪಾರಿಗಳ ಆಹಾರ ಮಾರಾಟ ಸ್ಥಳಗಳನ್ನು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಆಗಸ್ಟ್ 30ರಿಂದ 2 ದಿನಗಳ ಕಾಲ ತಪಾಸಣೆಯಲ್ಲಿ 61ಆಹಾರ ಮಾದರಿ ಸಂಗ್ರಹಿಸಿ ಪ್ರಯೋಗಾಲಯ ಪರೀಕ್ಷೆಗಾಗಿ ಕಳುಹಿಸಲಾಗಿದೆ.
ಸ್ವಚ್ಛತೆ ಹಾಗೂ ಸುರಕ್ಷತಾ ಕ್ರಮ ಪಾಲಿಸದ 52 ವರ್ತಕರಿಗೆ ನೋಟಿಸ್ ಜಾರಿ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ನ್ಯೂನತೆ ಸರಿಪಡಿಸಿ ಕೊಳ್ಳದಿದ್ದರೆ, ತಪ್ಪು ಮರುಕಳಿಸಿದರೆ ದಂಡದ ಜತೆಗೆ ಶಿಕ್ಷೆ ವಿಧಿಸಲಾಗುವುದೆಂದು ಅಧಿಕಾರಿಗಳು ಎಚ್ಚರಿಸಿದ್ದಾರೆ. ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಪಾಡುವ ಹಾಗೂ ವೈಯಕ್ತಿಕ ಸ್ವಚ್ಛತೆ ಕುರಿತಂತೆ ಜಾಗೃತಿ ಮೂಡಿಸಿದ್ದಾರೆ. ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಅಂ ಕಿತಾಧಿಕಾರಿ ರಾಜಶೇಖರ ಪಾಳೇದವರ,ಆಹಾರ ಸುರಕ್ಷತಾ ಅಧಿಕಾರಿಗಳಾದ ನಂದಿನಿಕಡಿ,ತಿರುಮಲೇಶ್ ಎನ್.ಎಚ್.ಮಂಜುನಾಥ್ ತಪಾ ಸಣೆಯಲ್ಲಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net