ಆಹಾರ ವಿತರಣೆಯಲ್ಲಿ ಲೋಪವಾದರೆ ದೂರು ನೀಡಿ: ಆಹಾರ ಆಯೋಗದ ಅಧ್ಯಕ್ಷ ಡಾ. ಎಚ್. ಕೃಷ್ಣ

H. KRISHNA- press meet (9)
Published on

ಹಾಸನ: ಎಲ್ಲರಿಗೂ ಗುಣಮಟ್ಟದ ಅಹಾರ ಒದಗಿಸುವುದು ಸರ್ಕಾರದ ಆದ್ಯ ಕರ್ತವ್ಯವಾಗಿದ್ದು, ಈ ವೇಳೆ ಏನಾದರೂ ಲೋಪ ಕಂಡು ಬಂದರೆ ಅಂತಹವರ ವಿರುದ್ಧ ಕ್ರಮ ಜರುಗಿಸಲಾಗುವುದು. ಈ ನಿಟ್ಟಿನಲ್ಲಿ ಗುರುವಾರದಿಂದ ಐದು ದಿನಗಳ ಕಾಲ ಹಾಸನ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದ್ದು, ಸಾರ್ವಜನಿಕರಿಂದ ಯಾವುದೇ ದೂರುಗಳಿದ್ದರೆ ದೂರವಾಣಿ ಮೂಲಕ ಇಲ್ಲವೇ ಹಾಸನ ನಗರದ ಪ್ರವಾಸಿ ಮಂದಿರಕ್ಕೆ ಖುದ್ಧಾಗಿ ಬಂದು ಲಿಖಿತ ರೂಪದಲ್ಲಿ ದೂರು ಸಲ್ಲಿಸಬಹುದಾಗಿದೆ ಎಂದು ಆಹಾರ ಆಯೋಗದ ಅಧ್ಯಕ್ಷರಾದ ಡಾ. ಎಚ್. ಕೃಷ್ಣ ತಿಳಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಹಸಿವು ನಿವಾರಿಸುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅನೇಕ ಕಾರ್ಯಕ್ರಮಗಳನ್ನು ಜಾರಿಗೆ ತಂದಿವೆ. ಅವುಗಳನ್ನು ಪ್ರತಿಯೊಬ್ಬ ನಗಳ ಕಾಲ ಹಾಸನ ಜಿಲ್ಲೆಯ ವಿವಿಧೆಡೆ ಆಹಾರ ಪದಾರ್ಥಗಳ ಗುಣಮಟ್ಟ ಪರಿಶೀಲನೆ ನಡೆಸಲಾಗುವುದು. ಜಿಲ್ಲೆಯಲ್ಲಿ 497 ಹೋಟೆಫಲಾನುಭವಿಗಳಿಗೆ ತಲುಪಿಸುವ ನಿಟ್ಟಿನಲ್ಲಿ ಆಹಾರ ಆಯೋಗ ಕೆಲಸ ಮಾಡುತ್ತಿದೆ. ಹಂಚಿಕೆಯಲ್ಲಿ ಅವ್ಯವಹಾರ ತಡೆಯುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಪ್ರವಾಸ ಹಮ್ಮಿಕೊಳ್ಳಲಾಗಿದೆ ಎಂದರು.

ಹಾಸನ ಜಿಲ್ಲೆಯಲ್ಲಿ 880 ನ್ಯಾಯಬೆಲೆ ಅಂಗಡಿಗಳಿದು ್ದ ಪ್ರತಿ ಸದಸ್ಯರಿಗೆ ಅನ್ನಭಾಗ್ಯ ಯೋಜನೆ ಅಡಿ 5 ಕೆ.ಜಿ ಅಕ್ಕಿ ಬದಲಿಗೆ 170 ರೂ.ನಂತೆ ಕುಟುಂಬ ಮುಖ್ಯಸ ್ಥರಿಗೆ ಬ್ಯಾಂಕ್‌ಗಳ ಖಾತೆಗಳಿಗೆ ನೇರವಾಗಿ ಹಣ ಹಾಕಲಾಗುತ್ತಿದೆ. ಹಾಸನದಲ್ಲಿ 226 ಹೋಟಲ್ ಗಳು ಪರವಾನಗಿ ಪಡೆದಿದೆ. 160ಕ್ಕೂ ಹೆಚ್ಚು ಹೋಟೆಲ್‌ಗಳನ್ನು ಹಾನಿಕಾರಕ ಎಂದು ಗುರುತಿಸಲಾಗಿದೆ. ಇವುಗಳಿಗೆ ನೋಟಿಸ್ ನೀಡಲಾಗಿದೆ. ಮರು ಪರಿಶೀಲನೆಯಲ್ಲಿ ದೋಷ ಕಂಡುಬಂದರೆ ಅಂತಹ ಹೋಟೆಲ್‌ಗಳನ್ನು ಮುಚ್ಚಲಾಗುವುದು. ಭೇಟಿ ವೇಳೆ ವಸತಿ ನಿಲಯಗಳು, ಸಾರ್ವಜನಿಕ ಆಸ್ಪತ್ರೆಗಳು, ಹೋಟೆಲ್, ಶಾಲೆಗಳು ಹಾಗೂ ಅಂಗನವಾಡಿಗಳಲ್ಲಿ ಬಾಣಂತಿಯರಿಗೆ ಹಾಗೂ ಮಕ್ಕಳಿಗೆ, ಸಾರ್ವಜನಿಕರಿಗೆ ನೀಡುವ ಆಹಾರ ಪದಾರ್ಥಗಳ ಬಗ್ಗೆ ಪರಿಶೀಲನೆ ನಡೆಸಲಾಗುವುದು. ಗುಣಮಟ್ಟದ ಆಹಾರ ಹಾಗೂ ಆಹಾರ ಪದಾರ್ಥಗಳನ್ನು ವಿತರಣೆಯಲ್ಲಿ ಆಹಾರ ಇಲಾಖೆಯ ವಿರುದ್ಧವಾಗಿ ವಿತರಣೆಯಲ್ಲಿ ತಾರತಮ್ಯ, ತೂಕದಲ್ಲಿ ವ್ಯತ್ಯಾಸ, ಕಳಪೆ ಆಹಾರ ವಿತರಣೆ, ಕಂಡು ಬಂದರೆ ಅಂತವರ ವಿರುದ್ದ ಕಾನೂನು ರೀತಿಯ ಕ್ರಮ ಜರುಗಿಸಲಾಗುವುದು ಎಂದರು.

ರಾಜ್ಯ ಸೇರಿದಂತೆ ಜಿಲ್ಲೆಯ ನಾನಾ ಪಡಿತರ ವಿತರಣಾ ಕೇಂದ್ರಗಳಲ್ಲಿ ಕಳಪೆ ಗುಣಮಟ್ಟದ ರಾಗಿಯನ್ನು ವಿತರಿಸುತ್ತಿರುವ ಬಗ್ಗೆ ವ್ಯಾಪಕ ದೂರಗಳು ಬಂದಿದ್ದು, ಜಿಲ್ಲೆಯಲ್ಲಿ ನ್ಯಾಯಬೆಲೆ ಅಂಗಡಿಗಳ ಪರಿಶೀಲನೆ ಮಾಡಲಾಗುವುದು. ಹೋಟೆಲ್‌ಗಳ ಆಹಾರಗಳಲ್ಲಿ ಹಾನಿಕಾರಕ ಬಣ್ಣ ಬಳಕೆ, ಅಕ್ರಮ ಪಡಿತರ ಸಾಗಣೆ, ವಿತರಣೆ ವೇಳೆ ತೂಕದಲ್ಲಿ ವ್ಯತ್ಯಾಸ ಮಾತ್ರವಲ್ಲದೆ ವಿಧವಾ ವೇತನ, ವೃದ್ದಾಪ್ಯ ವೇತನ, ಗೃಹಲಕ್ಷ್ಮೀ ಯೋಜನೆ ಸೇರಿದಂತೆ ಇನ್ನಿತರ ಯೋಜನೆಗಳಲ್ಲಿ ಭ್ರಷ್ಟಾಚಾರ ಅಥವಾ ಅವ್ಯವಹಾರದ ಬಗ್ಗೆ ಯಾವುದೇ ದೂರುಗಳಿದ್ದಲ್ಲಿ ತಮಗೆ ದೂರುಗಳನ್ನು ನೀಡಬಹುದಾಗಿದೆ, ಯಾವುದೇ ರೀತಿಯ ಭ್ರಷ್ಟಾಚಾರ ಅಥವಾ ಅವ್ಯವಹಾರಕ್ಕೆ ಆಯೋಗ ಅವಕಾಶ ನೀಡುವುದಿಲ್ಲ ಎಂದು ಹೇಳಿದರು.

ಯಾವುದಾದರೂ ದೂರುಗಳಿದ್ದರೆ ಸಾರ್ವಜನಿಕರು ಆಹಾರ ನಾಗರಿಕ ಸರಬರಾಜು ಮತು ್ತ ಗ್ರಾಹಕರ ವ್ಯವಹಾರಗಳ ಇಲಾಖೆಯಡಿ ಬರುವ ಯಾವುದೇ ದೂರುಗಳನ್ನು ಸಲ್ಲಿಸಬಹುದಾಗಿದ್ದು, ಎಚ್. ಕೃಷ್ಣ ಅಧ್ಯಕ್ಷರು 9448466099, ಸದಸ್ಯರ ದೂರವಾಣಿ ಸಂಖ್ಯೆ 8105612230, 9448992005, 9845875109, 9945037681, 9845342323, 9663961037 ಸಂಪರ್ಕಿಸಬಹುದಾಗಿದೆ ಎಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಆಹಾರ ಆಯೋಗದ ಸದಸ್ಯರಾದ ಲಿಂಗರಾಜ ಕೋಟೆ, ಸುಮಂತ್ ರಾವ್, ಮಾರುತಿ ಎಂ ದೊಡ್ಡಲಿಂಗಣ್ಣವರ, ರೋಹಿಣಿಪ್ರಿಯಾ, ಕೆ.ಎಸ್ ವಿಜಯಲಕ್ಷ್ಮೀ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net