ಆಹಾರ ಕಿಟ್ ವಿತರಿಸಿದ ಶಾಸಕ ದಿನಕರ ಶೆಟ್ಟಿ

10gkn1-a=
Published on

ಗೋಕರ್ಣ: ನಾಡುಮಾಸ್ಕೇರಿ ಮತ್ತು ಹನೇಹಳ್ಳಿ ಗ್ರಾಮ ಪಂಚಾಯಿತಿಯ ವಿವಿಧೆಡೆ 500ಕ್ಕೂ ಹೆಚ್ಚಿನ ಕುಟುಂಬಗಳಿಗೆ ಶಾಸಕ ದಿನಕರ ಶೆಟ್ಟಿ ಆಹಾರ ಸಾಮಗ್ರಿಗಳ ಕಿಟ್ ವಿತರಿಸಿದರು. ಬಳಿಕ ಮಾತನಾಡಿದ ಶಾಸಕ ದಿನಕರ ಶೆಟ್ಟಿ, ಕರೊನಾ ಆತಂಕ ಮತ್ತು ಲಾಕ್​ಡೌನಿಂದಾಗಿ ಈ ಭಾಗಕ್ಕೆ ಮಂಜೂರಾದ ಕೋಟ್ಯಂತರ ರೂ. ಅಭಿವೃದ್ಧಿ ಕೆಲಸಗಳು ಆರಂಭವಾಗಲು ವಿಳಂಬವಾಗಿವೆ. ಕಾಮಗಾರಿಗಳನ್ನು ಒಂದೊಂದಾಗಿ ಪ್ರಾರಂಭಿಸಲಾಗುವುದು. ಬಂದರು ಪ್ರದೇಶ ತದಡಿಯಿಂದ ಬೇಲೇಕಾನವರೆಗೆ ಕಾಂಕ್ರೀಟ್ ಹಾಕುವ ಕೆಲಸ ಶೀಘ್ರ ಆರಂಭಿಸಲಾಗುವುದು ಎಂದರು. ಪಂಚಾಯಿತಿ ಉಪಾಧ್ಯಕ್ಷ ಶೇಖರ ನಾಯ್ಕ, ತಾಪಂ ಸದಸ್ಯ ಮಹೇಶ ಶೆಟ್ಟಿ, ಮಾಜಿ ಅಧ್ಯಕ್ಷ ನಾಗರಾಜ ಹಿತ್ತಲಮಕ್ಕಿ, ಕುಮಾರ ಮಾರ್ಕಾಂಡೆ, ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಮಂಜುನಾಥ ಜನ್ನು, ಶಕ್ತಿ ಕೇಂದ್ರ ಅಧ್ಯಕ್ಷ ದಯಾನಂದ ನಾಯ್ಕ, ವಸಂತ ಶೆಟ್ಟಿ, ಹನೇಹಳ್ಳಿ ಹಾಗೂ ನಾಡುಮಾಸ್ಕೇರಿಯಲ್ಲಿ ನಡೆದ ಕಿಟ್ ವಿತರಣೆ ವೇಳೆ ಗ್ರಾಪಂ ಅಧ್ಯಕ್ಷ ಜಯಂತ ನಾಯ್ಕ, ತಾಪಂ ಸದಸ್ಯ ರಾಜೇಶ ನಾಯಕ ಮತ್ತು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net