ಆಹಾರ ಉದ್ದಿಮೆದಾರರ ಅಂಗಡಿಗಳಿಗೆ ಭೇಟಿ ಪರಿಶೀಲನೆ

WhatsApp Image 2024-08-31 at 4.53.57 PM (1)
Published on

ಗದಗ: ಆರೋಗ್ಯ ಸಚಿವರು ಹಾಗೂ ಆಹಾರ ಸುರಕ್ಷತಾ ಆಯುಕ್ತರ ಆದೇಶದಂತೆ ರಾಜ್ಯಾದ್ಯಂತ ಎಲ್ಲ ಜಿಲ್ಲೆಗಳಲ್ಲೂ ಶುದ್ಧ ಆಹಾರ ನೀಡುವ ಬಗ್ಗೆ ಅರಿವು ಮೂಡಿಸುವುದು, ನೋಂದಣಿ ಮತ್ತು ಪರವಾನಿಗೆ ಬಗ್ಗೆ ಜಾಗೃತಿ ಮೂಡಿಸುವುದು, ಹೋಟೆಲ್ ಬೀದಿ ಬದಿ ವ್ಯಾಪಾರಸ್ಥರು, ಬೇಕರಿಯವರು, ರೆಸ್ಟೊರೆಂಟ್‌ಗಳಲ್ಲಿ ಸ್ವಚ್ಛತೆಯ ಅರಿವು ಮೂಡಿಸುವುದು, ಮತ್ತು ಪರಿಶಿಲಿಸುವುದು ಹಾಗೂ ದಂಡ ವಿದಿಸುವುದು ಮುಂತಾದ ಕಾರ್ಯಕ್ರಮಗಳನ್ನು ಅನುಷ್ಟಾನಗೊಳಿಸಲು ಸೂಚಿಸಲಾಗಿದೆ.

ಅದರನ್ವಯ ಗದಗ ಜಿಲ್ಲೆಯಲ್ಲಿ ಅಗಸ್ಟ 30 ರಂದು 43 ಆಹಾರ ಉದ್ದಿಮೆದಾರರ ಅಂಗಡಿಗಳಿಗೆ ಭೇಟಿ ನೀಡಿ ಪರಿಶೀಲಿಸಿ ನೋಟೀಸ್ ಜಾರಿ ಮಾಡಿ 13,000/- ರೂ.ಗಳನ್ನು ದಂಡ ವಿಧಿಸಲಾಯಿತು. ಅಗಸ್ಟ 31 ರಂದು 39 ಆಹಾರ ಉದ್ದಿಮೆದಾರರ ಅಂಗಡಿಗಳಿಗೆ ಭೇಟಿ ನೀಡಿ ಪರಿಶೀಲಿಸಿ ನೋಟಿಸ ಜಾರಿ ಮಾಡಿ 19,100 ರೂ.ಗಳನ್ನು ದಂಡ ವಿಧಿಸಲಾಯಿತು ಎಂದು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಅಂಕಿತ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net