ಆಸ್ಪತ್ರೆಗೆ ಕುಡಿವ ನೀರಿನ ಯಂತ್ರ ವಿತರಣೆ

31 yelandur 01
Published on

ಯಳಂದೂರು: ಪಟ್ಟಣದಲ್ಲಿರುವ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ಕೆನರಾ ಬ್ಯಾಂಕ್ ವತಿಯಿಂದ ಶುದ್ಧ ಕುಡಿಯುವ ನೀರಿನ ಯಂತ್ರವನ್ನು ಶುಕ್ರವಾರ ವಿತರಿಸಲಾಯಿತು.ಬ್ಯಾಂಕಿನ ಸಹಾಯಕ ಪ್ರಧಾನ ವ್ಯವಸ್ಥಾಪಕ ಕೆ.ಜೆ.ಎಸ್. ನಾಯಕ್ ಮಾತನಾಡಿ, ಸಾರ್ವಜನಿಕ ಆಸ್ಪತ್ರೆಗೆ ಗ್ರಾಮೀಣ ಬಡಜನರೇ ಹೆಚ್ಚು ಬರುತ್ತಾರೆ. ಇವರಿಗೆ ಶುದ್ಧ ಕುಡಿಯುವ ನೀರು ಲಭಿಸುವುದಿಲ್ಲ. ಹೀಗಾಗಿ ಶುದ್ಧ ಕುಡಿಯುವ ನೀರು ಪೂರೈಸುವ ಯಂತ್ರವನ್ನು ವಿತರಿಸಲಾಗಿದೆ ಎಂದರು. ಬ್ಯಾಂಕಿನ ವ್ಯವಸ್ಥಾಪಕ ತ್ರಿಪುರಾರಿ, ಮಹೇಶ್, ವೈದ್ಯಾಧಿಕಾರಿ ಡಾ.ಶ್ರೀಧರ್ ಡಾ. ನಾಗೇಂದ್ರಮೂರ್ತಿ, ಸೋಮಣ್ಣ ಅನೇಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net