ಆಸ್ತಿ ವಿಚಾರ ಕಿರುಕುಳ ತಾಳಲಾರದೆ ವ್ಯಕ್ತಿ ಆತ್ಮಹತ್ಯೆ

suicide
Published on

ಅರಸೀಕೆರೆ : ಆಸ್ತಿ ವಿಚಾರವಾಗಿ ಸಹೋದರಿಯರು, ಅಣ್ಣ ಮತ್ತು ಸೋದರ ಮಾವನ ಕಿರುಕುಳ ತಾಳಲಾರದೆ ವ್ಯಕ್ತಿ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಗರದಲ್ಲಿ ನಡೆದಿದೆ.
ನಗರದ ದತ್ತಾತ್ರೇಯ ಬಡಾವಣೆ ನಿವಾಸಿ ಸತೀಶ (52) ಮೃತರು. ಇವರಿಗೆ ಚಿಕ್ಕಮಗಳೂರಿನಲ್ಲಿ 2 ಶೀಟಿನ ಮನೆಗಳಿದ್ದು ಒಂದನ್ನು ಬಾಡಿಗೆಗೆ ಮತ್ತೊಂದನ್ನು ಭೋಗ್ಯಕ್ಕೆ ಕೊಟ್ಟಿದ್ದಾರೆ. 2022ರಲ್ಲಿ ಸತೀಶ ಅವರ ತಾಯಿ ಮರಣ ಹೊಂದಿದ್ದು, ಆಗಿನಿಂದ ಸಹೋದರಿಯರಾದ ರಾಜೇಶ್ವರಿ, ಉಮಾ, ಸೋದರ ಮಾವ ಪಾಂಡು, ಅಣ್ಣ ಗಿರೀಶ ಅವರೆಲ್ಲರೂ ಆಸ್ತಿ ಹಾಗು ಚಿನ್ನಾಭರಣಕ್ಕಾಗಿ ಜಗಳ ಮಾಡುತ್ತಿದ್ದರು. ಇದರಿಂದ ಬೇಸತ್ತ ಸತೀಶ್ ಅವರು ಮನೆಯ ಫ್ಯಾನ್‌ಗೆ ನೇಣು ಹಾಕಿಕೊಂಡು ಮೃತಪಟ್ಟಿದ್ದಾರೆ. ಸತೀಶ ಅವರ ಪತ್ನಿ ಶಶಿಕಲಾ ಮಾ. 6 ರಂದು ಮಕ್ಕಳೊಂದಿಗೆ ಬೆಂಗಳೂರಿಗೆ ತೆರಳಿದ್ದರು. ಮಾ. 10ರಂದು ಮನೆಗೆ ಬಂದು ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವ ವಿಚಾರ ತಿಳಿದಿದೆ. ಸ್ಥಳದಲ್ಲಿ ಡೇತ್ ನೋಟ್ ಸಿಕ್ಕಿದ್ದು, ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net