ಆಸ್ತಿ ರಕ್ಷಣೆಯಲ್ಲಿ ಸಿಸಿ ಕ್ಯಾಮರಾ ಕಣ್ಗಾವಲು

25kmr1
ಕಮಲನಗರ ಠಾಣೆಯಲ್ಲಿ ಗುರುವಾರ ಸಿಸಿ ಕ್ಯಾಮರಾ ವೀಕ್ಷಣೆ ಕೋಣೆಗೆ ಐಜಿಪಿ ಅಜಯ ಹಿಲೋರಿ ಚಾಲನೆ ನೀಡಿದರು. ಡಿವೈಎಸ್‌ಪಿ ಶಿವಾನಂದ ಪವಾಡಶೆಟ್ಟಿ, ಸಿಪಿಐ ಅಮರೆಪ್ಪ, ಪಿಎಸ್‌ಐ ಚಂದ್ರಶೇಖರ ಮತ್ತು ಬಾಲಾಜಿ ಇದ್ದರು.
Published on

ಕಮಲನಗರ: ಜನ ಮತ್ತು ಆಸ್ತಿ ರಕ್ಷಣೆಯಲ್ಲಿ ಸಿಸಿಟಿವಿ ಕ್ಯಾಮರಾ ವ್ಯವಸ್ಥೆ ಕಣ್ಗಾವಲು ಸಾಮರ್ಥ್ಯ ಒದಗಿಸುತ್ತದೆ ಎಂದು ಐಜಿಪಿ ಅಜಯ ಹಿಲೋರಿ ಹೇಳಿದರು.

ಪಟ್ಟಣದ ಪೊಲೀಸ್ ಠಾಣೆಯಲ್ಲಿ ಗುರುವಾರ ಸಿಸಿ ಕ್ಯಾಮರಾ ವೀಕ್ಷಣೆ ಕೋಣೆ ಉದ್ಘಾಟಿಸಿದ ಅವರು, ಅಡೆತಡೆ, ಒಳನುಗ್ಗುವಿಕೆ ಪತ್ತೆ ಮತ್ತು ಪ್ರವೇಶ ನಿಯಂತ್ರಣಕ್ಕಾಗಿ ವಿಡಿಯೋ ಕವರೇಜ್ ಮತ್ತು ಭದ್ರತಾ ವ್ಯವಸ್ಥೆ ಬೆಂಬಲಿಸಲು ನಿರ್ಣಾಯಕ ಅಂಶಗಳ ಆಧಾರದ ಮೇಲೆ ಸಿಸಿ ಕ್ಯಾಮರಾ ಅಳವಡಿಸಲಾಗಿದೆ ಎಂದರು.

ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಘೋಷಣೆ ಹಿನ್ನಲೆಯಲ್ಲಿ ಸೊಲ್ಲಾಪುರ, ಉಸ್ಮಾನಾಬಾದ್, ನಾಂದೇಡ್, ದೇಗಲೂರು, ಉದಗೀರ, ದೇವಣಿ, ಔರಾದ್(ಎಸ್) ಕರ್ನಾಟಕ ಗಡಿಗೆ ಹೊಂದಿಕೊಂಡಿದ್ದು, ಯಾವುದೇ ರೀತಿಯ ಅಕ್ರಮ ನಡೆಯದಂತೆ ಕಟ್ಟೆಚ್ಚರ ವಹಿಸುವಂತೆ ಸೂಚಿಸಿದರು.

ಸಿಪಿಐ ಅಮರೆಪ್ಪ ಶಿವಬಲ ಮಾತನಾಡಿ, ಠಾಣೆಯ ಪ್ರಗತಿ ಕುರಿತು ಮಾಹಿತಿ ನೀಡಿದರು. ಭಾಲ್ಕಿ ಡಿವೈಎಸ್‌ಪಿ ಶಿವಾನಂದ ಪವಾಡಶೆಟ್ಟಿ, ಪಿಎಸ್‌ಐ ಚಂದ್ರಶೇಖರ ನಿರ್ಣೇಕರ್, ಅಪರಾಧ ವಿಭಾಗದ ಪಿಎಸ್‌ಐ ಬಾಲಾಜಿ ಬೆಳಕಟ್ಟೆ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net