ಆಸ್ತಿ ಜಗಳ-ತಂದೆಯನ್ನೆ ಕೊಂದ ಪಾಪಿ ಮಗ

nagappa
Published on

ಶಹಾಪುರ: ಆಸ್ತಿ ವಿಚಾರಕ್ಕೆ ಮಗನೊಬ್ಬ ತನ್ನ ತಂದೆಯನ್ನೇ ಬರ್ಬರವಾಗಿ ಕೊಲೆಗೈದ ಅಮಾನವೀಯ ಘಟನೆ ತಾಲೂಕಿನ ಮಡ್ನಾಳ ಗ್ರಾಮದ ಜಮೀನೊಂದರಲ್ಲಿ ಭಾನುವಾರ ನಡೆದಿದೆ. ತಾಲೂಕಿನ ಹಳಿಸಗರ್ ಗ್ರಾಮದ ಯಂಕಪ್ಪ ಮ್ಯಾಕಲ್ದಿನ್ನಿ ಕೊಲೆಯಾದ ದುರ್ದೈವಿ. ನಾಗಪ್ಪ ಎಂಬುವವನೇ ತನ್ನ ತಂದೆಯನ್ನು ಕೊಲೆ ಮಾಡಿ ನೇರವಾಗಿ ಪೊಲೀಸ್ ಠಾಣೆಗೆ ಹೋಗಿ ಶರಣಾಗಿz್ದÁನೆ. ಆಸ್ತಿ ವಿಚಾರವಾಗಿ ಆಗಾಗ ತಂದೆ ಮತ್ತು ಮಗನ ಮಧ್ಯೆ ಜಗಳ ನಡೆದಿದೆ. ತಂದೆ ಜಮೀನಲ್ಲಿ ಕೃಷಿ ಚಟುವಟಿಕೆಯಲ್ಲಿದ್ದಾಗ ವಿಷಯ ತಿಳಿದ ಮಗ ಜಮೀನಿಗೆ ಹೋಗಿ ಆಸ್ತಿ ವಿಚಾರಕ್ಕೆ ಇಬ್ಬರ ನಡುವೆ ವಾಗ್ವಾದ ಜೋರಾಗಿದೆ. ಕೊನೆಗೆ ಜಗಳ ತಾರಕ್ಕಕ್ಕೇರಿ ಕೋಪಗೊಂಡ ಮಗ ಅ¯್ಲೆÃ ಇದ್ದ ಫಲಗದಿಂದ ಬಲವಾಗಿ ತಲೆಗೆ ಹೊಡೆದಿz್ದÁನೆ. ತಲೆಯಿಂದ ರಕ್ತಸ್ರಾವವಾಗಿ ಅ¯್ಲÉÃ ಕೂಸಿದು ಬಿದ್ದು ಸ್ಥಳದಲ್ಲಿಯೇ ಮೃತಪಟ್ಟಿz್ದÁನೆ ಎಂದು ಕುಟುಂಬಸ್ಥರು ತಿಳಿಸಿz್ದÁರೆ.

ಘಟನೆ ವಿವರ: ಕೊಲೆಯಾದ ಯಂಕಪ್ಪನಿಗೆ ಒಟ್ಟು ಒಂಬತ್ತು ಜನ ಮಕ್ಕಳು. ಅದರಲ್ಲಿ ೪ ಹೆಣ್ಣು ಮಕ್ಕಳು. ೫ ಜನ ಗಂಡು ಮಕ್ಕಳು. ಅದರಲ್ಲಿ ೮ ಜನ ಮಕ್ಕಳಿಗೂ ಮದುವೆಯಾಗಿದೆ. ಇನ್ನು ಕಿರಿಯ ಮಗ ನಾಗಪ್ಪನಿಗೆ ಮದುವೆ ಆಗಿಲ್ಲ. ನನಗೆ ಸಾಲ ಆಗಿದೆ, ಜಮೀನು ಮಾರಿ ಸಾಲ ತೀರಿಸುತ್ತೇನೆ ಎಂದು ಯಂಕಪ್ಪ ತನ್ನ ಮಕ್ಕಳಿಗೆ ತಿಳಿಸಿದಾಗ ಇಲ್ಲ ನಾವು ಯಾವುದೇ ಕಾರಣಕ್ಕೂ ಜಮೀನು ಮಾರಲು ಬಿಡುವುದಿಲ್ಲ ಎಂದು ಮಕ್ಕಳು ಹೇಳುತ್ತಲೇ ಬಂದಿದ್ದರು. ಈ ವಿಷಯವಾಗಿ ಹಿರಿಯ ಮಗ ಭೀಮರಾಯ ಕೋರ್ಟ್ ಮೆಟ್ಟಿಲು ಹತ್ತಿz್ದÁನೆ. ವಿಚಾರಣೆ ನಡೆಸಿದ ನ್ಯಾಯಾಲಯ, ೯ ಜನ ಮಕ್ಕಳಿಗೂ ಒಂದೊAದು ಎಕರೆ ಹಾಗೂ ಒಂದು ಎಕರೆ ತಂದೆ-ತಾಯಿಗೆ ಎಂದು ತೀರ್ಪು ನೀಡಿದೆ. ಇದರಿಂದ ಕುಪಿತನಾದ ಚಿಕ್ಕ ಮಗ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೆ ಏಕೆ ಪಾಲು ಕೊಡಬೇಕು ಎಂದು ತಂದೆ ಜತೆ ಆಗಾಗ ಜಗಳವಾಡುತ್ತಿದ್ದ ಎಂದು ಅಕ್ಕ, ಪಕ್ಕದ ಸಂಬAಧಿಕರು ತಿಳಿಸಿz್ದÁರೆ. ಈ ವಿಚಾರವಾಗಿ ಒಂದೆರಡು ದಿನದಲ್ಲಿ ಗ್ರಾಮದಲ್ಲಿ ನ್ಯಾಯ ಪಂಚಾಯಿತಿ ಮಾಡುವ ವಿಚಾರವಿತ್ತು. ಅಷ್ಟರಲ್ಲಿ ಮಗ ತನ್ನ ತಂದೆಯನ್ನೆ ಕೊಲೆ ಮಾಡಿದ್ದಾನೆ. ಮೃತ ದೇಹವನ್ನು ತಾಲೂಕು ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳಿಸಲಾಗಿದೆ. ಭೀಮರಾಯನಗುಡಿಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net