ಆಸ್ಕರ್ ಫರ್ನಾಂಡೀಸ್ ಪಾರ್ಥಿವ ಶರೀರ ಉಡುಪಿಗೆ ಆಗಮನ‌. ಶೋಕಮಾತ ಇಗರ್ಜಿಯಲ್ಲಿ ಶ್ರದ್ಧಾಂಜಲಿ

IMG-20210914-WA0016
Published on

ಉಡುಪಿ : ಮಾಜಿ ಕೇಂದ್ರ ಸಚಿವ, ಹಿರಿಯ ಕಾಂಗ್ರೆಸ್ ನಾಯಕ ಆಸ್ಕರ್ ಫೆರ್ನಾಂಡಿಸ್ ಅವರ ಪಾರ್ಥಿವ ಶರೀರ ಮಂಗಳವಾರ ಬೆಳಗ್ಗೆ ಮಂಗಳೂರಿನಿಂದ ಉಡುಪಿಗೆ ಆಗಮಿಸಿತು.

ಉಡುಪಿ ಶೋಕ ಮಾತಾ ಇಗರ್ಜಿಗೆ ಆಗಮಿಸಿದ ಪಾರ್ಥಿವ ಶರೀರಕ್ಕೆ‌ ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲಾಧಿಕಾರಿ ಕೂರ್ಮಾ ರಾವ್ ಅಂತಿಮ‌ ನಮನ ಸಲ್ಲಿಸಿದರು.

ಬಳಿಕ ಉಡುಪಿ ಧರ್ಮಪ್ರಾಂತ್ಯದ ಬಿಷಪ್ ಜೆರಾಲ್ಡ್ ಐಸಾಕ್ ಲೋಬೊ ನೇತೃತ್ವದಲ್ಲಿ ಬಲಿಪೂಜೆ ನೆರವೇರಿಸಲಾಯಿತು. ಈ ಹಿನ್ನೆಲೆಯಲ್ಲಿ ಚಚ್೯ ಆವರಣದಲ್ಲಿ ಬಿಗಿ ಪೊಲೀಸ್ ಭದ್ರತೆ ಒದಗಿಲಾಗಿದೆ.

ಬ್ಲೋಸಂ ಫೆರ್ನಾಂಡಿಸ್, ಮಾಜಿ ಸಚಿವರಾದ ಪ್ರಮೋದ್ ಮಧ್ವರಾಜ್, ವಿನಯ ಕುಮಾರ್ ಸೊರಕೆ, ಶಾಸಕ ಯು.ಟಿ.ಖಾದರ್, ವಿಧಾನ ಪರಿಷತ್ ಸದಸ್ಯ ಪ್ರತಾಪ್ ಚಂದ್ರ ಶೆಟ್ಟಿ, ಮಾಜಿ ಶಾಸಕ ಜೆ.ಆರ್.ಲೋಬೊ, ಐವನ್ ಡಿಸೊಜ, ಎಂ.ಎ. ಗಫೂರ್ ಮೊದಲಾದವರು ಹಾಜರಿದ್ದರು. ಬಳಿಕ ಬ್ರಹ್ಮಗಿರಿಯಲ್ಲಿರುವ ಆಸ್ಕರ್ ಅವರ ಮೂಲ ಮನೆಗೆ ಶರೀರ ಕೊಂಡೊಯ್ಯಲಾಯಿತು.‌ ಬಳಿಕ ಪಾರ್ಥಿವ ಶರೀರವನ್ನು ಸಾರ್ವಜನಿಕ ವೀಕ್ಷಣೆಗಾಗಿ ಉಡುಪಿ ಕಾಂಗ್ರೆಸ್ ಭವನ ದಲ್ಲಿ‌ ವ್ಯವಸ್ಥೆ ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net