ಆಸಕ್ತಿ-ಶ್ರದ್ಧೆಯಿದ್ದಲ್ಲಿ ಸದೃಢ ವ್ಯಕ್ತಿತ್ವ ಸಾಧ್ಯ- ಡಾ. ವಿಜಯಲಕ್ಷ್ಮಿ ವೀರಮಾಚನೇನಿ

ch.jpg
Published on
ದಾವಣಗೆರೆ: ವಿದ್ಯಾರ್ಥಿಗಳಲ್ಲಿ ಆಸಕ್ತಿ, ಶ್ರದ್ಧೆ ಮತ್ತು ಆತ್ಮಸ್ಥೈರ್ಯವಿದ್ದಲ್ಲಿ ಸಮಾಜದಲ್ಲಿ ಸದೃಢ ವ್ಯಕ್ತಿಗಳಾಗಿ ಬೆಳೆಯಲು ಸಾಧ್ಯವಿದೆ ಎಂದು ಸಂಸ್ಥೆಯ ಸಂಸ್ಥಾಪಕಿ ಡಾ. ವಿಜಯಲಕ್ಷ್ಮಿ ವೀರಮಾಚನೇನಿ ಹೇಳಿದರು.
ಶಿರಮಗೊಂಡನಹಳ್ಳಿಯ ಸುಧಾ ವೀರೇಂದ್ರ ಪಾಟೀಲ್ ಸಮುದಾಯ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ, ವಿಶ್ವಚೇತನ ವಿದ್ಯಾನಿಕೇತನ ಪ.ಪೂ. ಕಾಲೇಜಿನ ವಾರ್ಷಿಕೋತ್ಸವ- ಚೇತನ ಕಾಂತಿ 2022 ಕಾರ್ಯಕ್ರಮದಲ್ಲಿ ಮಾತನಾಡಿ, ವೈದ್ಯರು, ಇಂಜಿನಿಯರ್‌ಗಳಾಗಲು ಕೋರ್ಸ್‌ಗಳಿವೆ. ಬುದ್ಧ-ಬಸವಣ್ಣ ಅವರಂತಾಗಲು ಯಾವುದೇ ಕೋರ್ಸ್‌ಗಳಿಲ್ಲ ಎಂದು ತಿಳಿಸಿದರು. ಡಿಡಿಪಿಯು ಎಂ. ಶಿವರಾಜ್ ಮಾತನಾಡಿ, ಗುಣಮಟ್ಟದ ಶಿಕ್ಷಣ ಕಲ್ಪಿಸುತ್ತಿರುವ ವಿಶ್ವಚೇತನ ಪದವಿ ಪೂರ್ವ ಕಾಲೇಜು ನಾಡಿಗೆ ಉತ್ತಮ ಪ್ರತಿಭೆಗಳನ್ನು ನೀಡುತ್ತ ಬಂದಿದೆ. ಇದು ಹೆಮ್ಮರವಾಗಿ ಬೆಳೆಯಲಿ ಎಂದು ಹಾರೈಸಿದರು. ರಸಾಯನಶಾಸ್ತ್ರದ ನಿವೃತ್ತ ಪ್ರೊಫೆಸರ್ ಡಾ. ಎಸ್.ಬಿ.ಬಾಲಾಜಿರಾವ್ ಮಾತನಾಡಿ ವಿದ್ಯಾರ್ಥಿಗಳು ಓದುವ ಸಮಯವನ್ನು ಸರಿಯಾಗಿ ಆಯ್ಕೆ ಮಾಡಿಕೊಳ್ಳಬೇಕು ಎಂದರು. ವ್ಯಕ್ತಿತ್ವ ಅಭಿವೃದ್ಧಿ ತರಬೇತುದಾರ ಆದರ್ಶ್ ಗೋಖಲೆ ಮಾತನಾಡಿ, ವಿದ್ಯಾಭ್ಯಾಸ ಒಂದು ತಪಸ್ಸಿನಂತೆ. ಕಠಿಣ ಪರಿಶ್ರಮದಿಂದ ವಿದ್ಯಾಬ್ಯಾಸ ಮಾಡಿದವರಿಗೆ ತಂತಾನೇ ಪ್ರತಿಫಲ ಸಿಗಲಿದೆ ಎಂದು ಹೇಳಿದರು. 2021ರ ನೀಟ್ ಪರೀಕ್ಷೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದ ಉತ್ಸಲಾ ಚೌದರಿ ಮತ್ತು ವಿಸ್ಮಯಾ, 2022ರ ನೀಟ್ ಪರೀಕ್ಷೆಯಲ್ಲಿ ಜಿಲ್ಲೆಗೆ ಪ್ರಥಮ, ದ್ವಿತೀಯ ಸ್ಥಾನ ಪಡೆದ ಮುರುಕಿ ಶ್ರೀ ಬಾರುಣಿ, ಎಂ.ಜಿ.ಕಾವ್ಯಾ ಹಾಗೂ ಇತರ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ವಿಶ್ವಚೇತನ ವಿದ್ಯಾನಿಕೇತನ ಶಾಲೆ ಅಧ್ಯಕ್ಷ ರಾಘವೇಂದ್ರ ಪ್ರಸಾದ್, ಚೇತನ ಸಂಸ್ಥೆಯ ನಿರ್ದೇಶಕ ವಿ.ವಿ ಕಿರಣ್, ಪ್ರೋಲಿಪೀಕ್ಸ್ ಸಾಫ್ಟ್‌ವೇರ್ ಕಂಪನಿಯ ಎಂಡಿ ರತ್ನಾಜಿ ರಾವ್, ವಿದ್ಯಾಚೇತನ ಕಾಲೇಜು ಪ್ರಾಚಾರ್ಯ ಜಿ. ಪವನ್ ಕುಮಾರ್, ವಿಶ್ವಚೇತನ ಕಾಲೇಜಿನ ಪ್ರಾಚಾರ್ಯ ಜಿ. ವಿನೋದ್ ಇದ್ದರು. ---
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net