ಆಸಕ್ತಿ ಕ್ಷೇತ್ರ ಆಯ್ದುಕೊಂಡು ಸಾಧನೆ ಮಾಡಿ

21 HDK 3
ಎಚ್.ಡಿ.ಕೋಟೆ ತಾಲೂಕಿನ ಹಿರೇಹಳ್ಳಿ ಕಾಲನಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಕಲಿಕಾ ಹಬ್ಬ ಕಾರ್ಯಕ್ರಮವನ್ನು ಅನೀಲ್ ಚಿಕ್ಕಮಾದು ಉದ್ಘಾಟಿಸಿದರು. ನಾಗಮ್ಮ ಪ್ರಕಾಶ್, ಪ್ರಕಾಶ್, ಮಂಜುನಾಥ್, ಬೆಟ್ಟಯ್ಯ, ನಾಗನಾಯಕ, ಮನೋರಮಾ, ವಿ.ಎಸ್.ಗೀತಾ, ಮಹಲಿಂಗಪ್ಪ ಇತರರಿದ್ದರು.
Published on

ಎಚ್.ಡಿ.ಕೋಟೆ: ಕಲಿಕಾ ಹಬ್ಬ ಮಕ್ಕಳ ಕಲಿಕೆ ಹಾಗೂ ಪಠ್ಯೇತರ ಚಟುವಟಿಕೆಗಳಿಗೆ ಪೂರಕವಾಗಿದ್ದು, ವಿದ್ಯಾರ್ಥಿಗಳು ತಮ್ಮ ಆಸಕ್ತಿಗೆ ಅನುಗುಣವಾಗಿ ಗುರಿಯ ಬಗ್ಗೆ ಕನಸು ಕಾಣಬೇಕು ಎಂದು ಶಾಸಕ ಅನಿಲ್ ಚಿಕ್ಕಮಾದು ಕಿವಿಮಾತು ಹೇಳಿದರು.

ತಾಲೂಕಿನ ಹಿರೇಹಳ್ಳಿ ಕಾಲನಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಕೆ.ಎಂ.ಹಳ್ಳಿ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಕ್ಕಳು ಯಾವುದೇ ಕ್ಷೇತ್ರವಿರಲಿ, ಎತ್ತರಕ್ಕೆ ಬೆಳೆಯಬೇಕು. ಪ್ರಸ್ತುತ ದಿನಗಳಲ್ಲಿ ಎಲ್ಲ ಕ್ಷೇತ್ರಗಳಲ್ಲೂ ವಿಫುಲ ಅವಕಾಶಗಳಿವೆ. ವಿದ್ಯಾರ್ಥಿಗಳು ತಮ್ಮ ಆಸಕ್ತಿಗೆ ಅನುಗುಣವಾಗಿ ಸೂಕ್ತವಾದ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ಸಾಧನೆ ಮಾಡಿ ಉತ್ತಮ ಬದುಕು ಕಟ್ಟಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಾಗಮ್ಮ ಪ್ರಕಾಶ್ ಮಾತನಾಡಿ, ಮಕ್ಕಳನ್ನು ಬೆಳೆಸುವಲ್ಲಿ ಪಾಲಕರ ಜವಾಬ್ದಾರಿ ಪ್ರಮುಖವಾಗಿದೆ. ಚಿಕ್ಕಂದಿನಿಂದಲೇ ಅವರಿಗೆ ಶಿಸ್ತು ಕಲಿಸಬೇಕು. ಮಕ್ಕಳಿಗೆ ದುಬಾರಿ ಬೆಲೆಯ ಮೊಬೈಲ್ ಫೋನ್, ಬೈಕ್ ಕೊಡಿಸದೆ ಅವರ ಜೀವನ ವಿಕಸನಕ್ಕೆ ಬೇಕಾದ ಪ್ರೋತ್ಸಾಹ ನೀಡಬೇಕೆಂದು ಪಾಲಕರಿಗೆ ಕಿವಿಮಾತು ಹೇಳಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಉದಯ್ ಕುಮಾರ್ ಮಾತನಾಡಿದರು. ಗ್ರಾಮದ ಮುಖಂಡರಾದ ಕೆಂಡಗಣ್ಣಸ್ವಾಮಿ, ನಾಗೇಗೌಡ, ಸೋಮೇಶ್, ಶಂಭೇಗೌಡ, ಗ್ರಾಪಂ ಸದಸ್ಯರಾದ ಮಂಜುನಾಥ್, ಬೆಟ್ಟಯ್ಯ, ನಾಗನಾಯಕ, ಎಸ್‌ಡಿಎಂಸಿ ಅಧ್ಯಕ್ಷ ಪ್ರಕಾಶ್, ಸ್ವಾಮಿಗೌಡ, ನಂಜರಾಜು, ಮುಖ್ಯ ಶಿಕ್ಷಕಿ ಮನೋರಮಾ, ಸಹಶಿಕ್ಷಕರಾದ ವಿ.ಎಸ್.ಗೀತಾ, ಮಹಲಿಂಗಪ್ಪ, ಶಂಭುಲಿಂಗು, ನಾಗರಾಜು, ಸಿಆರ್‌ಪಿ ಮಹೇಂದ್ರ, ಗ್ರಾಪಂ ಸದಸ್ಯರು, ಎಸ್‌ಡಿಎಂಸಿ ಸದಸ್ಯರು, ಕ್ಲಸ್ಟರ್ ಮಟ್ಟದ ಎಲ್ಲ ಶಾಲೆಗಳ ಮುಖ್ಯಶಿಕ್ಷಕರು, ಅಧ್ಯಕ್ಷರು, ಶಾಲಾ ಮಕ್ಕಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net