ಆಸಕ್ತ ಕೋಸ್೯ ಆಯ್ಕೆ ಮಾಡಿಕೊಳ್ಳಿ

Sai Spoorthi College
?????????????????????????????????????????????????????????????????????????????????????????????????????????????????????????????????????????????????????????????????????????????????????????????????????
Published on

ಬೀದರ್: ದ್ವಿತೀಯ ಪಿಯುಸಿ ನಂತರ ಹಲವು ಕೋಸ್೯ ಗಳಿವೆ. ವಿದ್ಯಾರ್ಥಿಗಳು ತಮಗೆ ಆಸಕ್ತಿಕರವಾದ ಕೋಸ್೯ ಆಯ್ಕೆ ಮಾಡಿಕೊಳ್ಳಬೇಕು ಎಂದು ಭೀಮಣ್ಣ ಖಂಡ್ರೆ ತಾಂತ್ರಿಕ ಕಾಲೇಜು (ಬಿಕೆಐಟಿ) ಪ್ರಾಚಾರ್ಯ ಎನ್.ಎಂ. ಬಿರಾದಾರ್ ಸಲಹೆ ನೀಡಿದರು.

ಇಲ್ಲಿಯ ಸಾಯಿ ಸ್ಫೂರ್ತಿ ಪದವಿಪೂರ್ವ ವಿಜ್ಞಾನ ಕಾಲೇಜಿನಲ್ಲಿ ಏರ್ಪಡಿಸಿದ್ದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶೈಕ್ಷಣಿಕ ಜೀವನದಲ್ಲಿ ಮಕ್ಕಳು ಸಮಯಕ್ಕೆ ಆದ್ಯತೆ ನೀಡಿ ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ಪ್ರಯತ್ನಿಸಬೇಕು ಎಂದರು.

ಪ್ರಾಚಾರ್ಯ ಚಂದ್ರಶೇಖರ ಬಿರಾದಾರ್ ಮಾತನಾಡಿ, ನುರಿತ, ಅನುಭವಿ ಉಪನ್ಯಾಸಕರು, ಗುಣಮಟ್ಟದ ಶಿಕ್ಷಣದಿಂದಾಗಿ ಕಾಲೇಜು ಪ್ರತಿವರ್ಷ ಅತ್ಯುತ್ತಮ ಫಲಿತಾಂಶ ಪಡೆಯುತ್ತಿದೆ ಎಂದು ತಿಳಿಸಿದರು.

ಚಿಟಗುಪ್ಪ ಸರ್ಕಾರಿ ಪಿಯು ಕಾಲೇಜಿನ ಭೌತವಿಜ್ಞಾನ ಉಪನ್ಯಾಸಕ ಶಿವಕುಮಾರ ಮಚಕುರೆ ಮಾತನಾಡಿ, ವಿದ್ಯಾರ್ಥಿಗಳು ಸಾಧಿಸುವ ಛಲ ಬೆಳೆಸಿಕೊಳ್ಳಬೇಕು ಎಂದರು.

ಬಿಕೆಐಟಿಯ ಪ್ರೊ.ಉಮಾಕಾಂತ ಮಠಪತಿ, ಪ್ರೊ.ಖಾಜಾ ಎಂ., ಪ್ರೊ.ವಿಜಯ ಕೆ., ಡಾ.ಪ್ರಶಾಂತ ಸಂಗೋಳಗಿ, ಗುಂಡಪ್ಪ, ಅಂಬಿಕಾ ಎಂ. ಇದ್ದರು. ಲಕ್ಷ್ಮೀಕಾಂತ ಸೂರೆ ಸ್ವಾಗತಿಸಿದರು. ದಿವ್ಯಾ ಮಠದ ನಿರೂಪಣೆ ಮಾಡಿದರು. ಸಂಜೀವಕುಮಾರ ಬಿ. ವಂದಿಸಿದರು.

ಟಾಪರ್ ವಿದ್ಯಾರ್ಥಿಗಳಾದ ರಾಜೇಶ್ವರಿ ಸಂಜುಕುಮಾರ (ಶೇ.96.16), ಆದಿತ್ಯ ಸಂತೋಷ ಶೆಟಕಾರ್ (ಶೇ.94.33), ಮಹೇಶ ಶ್ರೀನಿವಾಸ (ಶೇ.92.66), ಆಶಾ ದಶರಥ (ಶೇ.90.5), ಪವನ್ ಹಣಮಂತ (ಶೇ.89.66) ಅವರನ್ನು ಸನ್ಮಾನಿಸಿ ಸ್ಮರಣಿಕೆ ನೀಡಿ ಪ್ರೋತ್ಸಾಹಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net