

ಕಲಬುರಗಿ: ಬ್ರಹ್ಮಪುರದ ದೇಶಮುಖ ವಾಡಾದಲ್ಲಿ ಕಳೆದ ಏಳು ದಿನಗಳಿಂದ ನಡೆಯುತ್ತಿರುವ ಆಷಾಢಿ ಉತ್ಸವಕ್ಕು ಸೋಮವಾರ ಗೋಪಾಲ ಕಾಲಾ ಮೂಲಕ ಸಂಭ್ರಮದ ತೆರೆ ಬಿದ್ದಿತು.
ಶ್ರೀ ರುಕ್ಮಿಣಿ ಪಾಂಡುರಂಗ ದೇವರ ಉತ್ಸವ ಮೂರ್ತಿ ಬೆಳಗ್ಗೆ ವಿಶೇಷ ಪೂಜೆ, ಅಲಂಕಾರ, ಅಭಿಷೇಕ, ಮಹಾಮಂಗಳಾರತಿ ಸೇರಿ ವಿವಿಧ ಕಾರ್ಯಕ್ರಮ ನಡೆದವು. ವಾಡಾದ ಪ್ರಮುಖ ಬೀದಿಗಳಲ್ಲಿ ಗಜ ವಾಹನದೊಂದಿಗೆ ಪಾಂಡುರಂಗನ ಉತ್ಸವ ನಡೆಯಿತು. ಅಂಗಳದಲ್ಲಿ ಶ್ರೀ ರುಕ್ಮಿಣಿ ಸಮೇತ ಪಾಡುರಂಗ ದೇವರನ್ನು ತೊಟ್ಟಿಲಲ್ಲಿ ಹಾಕಿ ತೊಟ್ಟಿಲೋತ್ಸವ ನೆರವೇರಸಲಾಯಿತು. ಶ್ರೀ ಅಂಬಾ ಭವಾನಿ ಮಂದಿರದ ಭಜನಾ ಮಂಡಳಿ ಸದಸ್ಯರು ಭಜನೆ ಮಾಡಿ ಸೇವೆ ಸಲ್ಲಿಸಿದರು.
ಸಂಜೆ ಅಂಗಳದಲ್ಲಿ ಮೊಸರಿನ ಗಡಿಗೆ ಒಡೆಯುವ ಸ್ಪರ್ಧೆ ಜರುಗಿತು. ಬಡಾವಣೆ ಯುವಕರು ಹಾಗೂ ಪ್ರಮುಖರು ಎತ್ತರದಲ್ಲಿ ಕಟ್ಟಿದ ಮೊಸರಿನ ಗಡಿಗೆ ಒಡೆಯಲು ಪ್ರಯತ್ನಿಸುತ್ತಿರುವುದು ವಿಶೇಷವಾಗಿತ್ತು.
ರಾಯ ದೇವರಾವ್ ದೇಶಮುಖ, ಪಾಂಡುರಂಗರಾವ ದೇಶಮುಖ, ಅಭಿಜಿತ್ ದೇಶಮುಖ, ಅಂಬರೀಶ ದೇಶಮುಖ, ದೀಪಕ ದೇಶಮುಖ, ಸುನೀಲ ದೇಶಮುಖ, ಶ್ರವಣ ದೇಶಮುಖ, ಅಮೋಘ ದೇಶಮುಖ, ಶರಂಗ್ ದೇಶಮುಖ, ಪ್ರತೀಕ್ ದೇಶಮುಖ, ಉಡುಪಿ ಪುರೋಹಿತ, ಉತ್ತಮ ಪುರೋಹಿತ ಇತರರಿದ್ದರು.