

ಶಹಾಬಾದ್: ಹಳೇ ಶಹಾಬಾದ್ ಬಡಾವಣೆಯಲ್ಲಿನ 16ನೇ ಶತಮಾನದ ಶ್ರೀ ರುಕ್ಮಿಣಿ ಪಾಂಡುರಂಗ ದೇವಸ್ಥಾನದಲ್ಲಿ ಐದು ದಿನಗಳ ಆಷಾಢ ಉತ್ಸವಕ್ಕೆ ಭಾನುವಾರ ಅದ್ದೂರಿ ತೆರೆ ಬಿದ್ದಿತು.
ಭಾನುವಾರ ಬೆಳಗ್ಗೆ ಕಾಕಡಾರತಿ, ಅಭಿಷೇಕ, ಅಲಂಕಾರ, ಮಹಾಮಂಗಳಾರತಿ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆದವು. ಮಧ್ಯಾಹ್ನ ಅಲಂಕೃತ ವಾಹನದಲ್ಲಿ ಪಾಂಡುರಂಗ, ಹನುಮಂತ, ಗರುಡ ಮೂರ್ತಿಗಳೊಂದಿಗೆ ವಿವಿಧ ವಾಧ್ಯ ವೃಂದದೊಂದಿಗೆ ಭವ್ಯ ಮೆರವಣಿಗೆ ಆರಂಭವಾಯಿತು. ಉತ್ಸವವೂ ಅಶೋಕ ವೃತ್ತದ ರಾಮಲಿಂಗೇಶ್ವರ ದೇವಸ್ಥಾನದ ಬಳಿ ಬಂದಾಗ ಅಸಂಖ್ಯಾತ ಭಕ್ತರು ಮೊಸರಿನ ಗಡಿಗೆ (ಗೋಪಾಲ ಕಾವಲಿ)ಯನ್ನು ಒಡೆದು ಸಂಭ್ರಮಿಸಿದರು. ಚಂದ್ರಭಾಗ ನದಿಯಲ್ಲಿ ದೀಪ ವಿಸರ್ಜಿಸುವ ಸಂಕೇತವಾಗಿ ಹೊರ ವಲಯದ ಬಾವಿಯಲ್ಲಿ ದೀಪ ವಿಸರ್ಜನೆ ಮಾಡುವ ಮೂಲಕ ಉತ್ಸವ ಸಂಪನ್ನಗೊಂಡಿತು.
ಪ್ರಮುಖರಾದ ಚಂದ್ರಕಾಂತ ಪಾಟೀಲ್, ಗುರುರಾಜ ಪಾಟೀಲ್, ಶ್ರೀಧರ ಪಾಟೀಲ್, ವಾಮನರಾವ ಪಾಟೀಲ್, ಭೀಮಸೇನರಾವ ಪಾಟೀಲ್, ಅಪ್ಪಾರಾವ ಪಾಟೀಲ್, ಲಕ್ಷ್ಮೀಕಾಂತ ಪಾಟೀಲ್, ದತ್ತಾತ್ರೇಯ ಪಾಟೀಲ್, ಅವಧೂತ ಪಾಟೀಲ್, ಅನೀಲ್ ಪಾಟೀಲ್, ಭೀಮರಾವ ಸೂಗೂರ, ಶರಣು ಪಾಟೀಲ್, ಶರಣು ಕೊಡದೂರ, ಗುರಯ್ಯ ಸ್ವಾಮಿ, ಗೋಪಾಲಾಚಾರ್ಯ ಜೋಶಿ, ಪದ್ಮನಾಭಾಚಾರ್ಯ ಜೋಶಿ, ಆನಂದ ನಾಗೂರಕರ್, ಅಂಕಿತ ಅಲಗಿಕರ್, ಪ್ರಮೋದ ಯರಗೋಳ, ಚಂದ್ರಕಾಂತ ಯರಗೋಳ, ಆನಂದ ಕುಲಕರ್ಣಿ, ವೆಂಕಟೇಶ ಅವಂತಿ, ಧೀರೇಂದ್ರ ಕುಲಕರ್ಣಿ ಇತರರಿದ್ದರು.