ಆಶೀರ್ವಾದ ಮಾಡಿ ಮತ್ತೊಮ್ಮೆ ಗೆಲ್ಲಿಸಿ

NIK_1883
Published on

ಕಲಬುರಗಿ: ನಿರೀಕ್ಷೆಯಂತೆ ಪP್ಷÀ ನನ್ನನ್ನು ಗುರುತಿಸಿ ಎರಡನೇ ಬಾರಿಗೆ ಅವಕಾಶ ನೀಡಿದ್ದು, ಜನರ ಆಶೀರ್ವಾದ ನನ್ನ ಮೇಲಿರಲಿ. ಯಾವ ಕಾರಣಕ್ಕೂ ಹೆದರದೆ ಮತ ಹಾಕಿ. ತಮ್ಮ ಗೆಲುವು ಕಟ್ಟಿಟ್ಟ ಬುತ್ತಿ ಎಂದು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯೂ ಆದ ಹಾಲಿ ಸಂಸದ ಡಾ.ಉಮೇಶ ಜಾಧವ್ ವಿಶ್ವಾಸ ವ್ಯಕ್ತಪಡಿಸಿದರು.
ಕಲಬುರಗಿ-ಬೆಂಗಳೂರು ಮಧ್ಯೆ ರೈಲು ಓಡಿಸಿದರೆ ಡಕೋಟಾ ಎನ್ನುತ್ತಾರೆ. ಇಂಥ ಕೀಳುಮಟ್ಟದ ರಾಜಕೀಯವನ್ನು ಖಂಡಿಸುವುದಾಗಿ ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ನಮಗಿಂತ ಹೆಚ್ಚು ಅವರೇ (ಕಾಂಗ್ರೆಸಿಗರು) ಅಧಿಕಾರ ಮಾಡಿದ್ದರೂ ಏನೂ ಮಾಡಲಾಗಿಲ್ಲ. ಜಿಲ್ಲಾದ್ಯಂತ ನೀರಿಗಾಗಿ ಹಾಹಾಕಾರ ಎದ್ದಿದೆ. ನೆಗೆಟಿವ್ ಥಿಂಕಿAಗ್ ಬಿಟ್ಟು ಮೊದಲು ನೀರಿನ ಸಮಸ್ಯೆ ಬಗೆಹರಿಸಿ ಎಂದು ಕುಟುಕಿದ ಜಾಧವ್,
ಈ ಭಾಗ ಅಭಿವೃದ್ಧಿ ಆಗಬಾರದು ಎಂಬುದು ಖರ್ಗೆ ಉz್ದÉÃಶ. ನರೇಂದ್ರ ಮೋದಿ ಗುರಿಯಾಗಿಸಿಕೊಂಡು ಕೆಟ್ಟ ಹೆಸರು ತರಲು ಕಾಂಗ್ರೆಸ್ ನಿರಂತರ ಪ್ರಯತ್ನಿಸುತ್ತಿದೆ. ಇಡೀ ವಿಶ್ವ ಭಾರತ ಕಡೆಗೆ ನೋಡುವಂತೆ ಮಾಡಿದ ನಾಯಕನ ಬಗ್ಗೆ ಅವಹೇಳನಕಾರಿ ಮಾತನಾಡುತ್ತಾರೆ. ಆದರೆ ಇಂಥ ಮಾತು, ಅಪಪ್ರಚಾರ ಲೋಕಸಭಾ ಚುನಾವಣೆಯಲ್ಲಿ ವರ್ಕೌಟ್ ಆಗುವುದಿಲ್ಲ ಎಂಬುದನ್ನು ಅರಿತುಕೊಳ್ಳಬೇಕು. ದೇಶದ ಜನ ಈಗಾಗಲೇ ತೀರ್ಮಾನಿಸಿಯಾಗಿದೆ ಎಂದರು.

ಸAವಿಧಾನದ ಬಗ್ಗೆ ಮಾತನಾಡುವ ಕಾಂಗ್ರೆಸಿಗರು ತಮ್ಮಿಂದಲೇ ಅದರ ರP್ಷÀಣೆ ಆಗುತ್ತದೆ ಎಂದು ಭಾವಿಸಿದ್ದಾರೆ. ಆದರೆ ಸಂವಿಧಾನ ಇಡೀ ವಿಶ್ವಕ್ಕೆ ಪರಿಚಯಿಸಿದ್ದು ನರೇಂದ್ರ ಮೋದಿ. ಸಂವಿಧಾನ ವಿರೋಧಿ ಕೆಲಸ ಕಾಂಗ್ರೆಸ್ ಮಾಡುತ್ತಿದೆ. ಮೋದಿ ಏನು ಕೊಡುಗೆ ಕೊಟ್ಟಿದ್ದಾರೆ ಎಂದು ಮಲ್ಲಿಕಾರ್ಜುನ ಖರ್ಗೆ ಕೇಳುತ್ತಾರೆ. ಮೋದಿ ದೇಶದ ಜನರಿಗೆ ಕೊಡುಗೆ ಕೊಟ್ಟಿದ್ದಾರೆ, ಖರ್ಗೆಯವರಿಗಲ್ಲ ಎಂದು ಲೇವಡಿ ಮಾಡಿದರು.

ಪ್ರಿಯಾಂಕ್ ಖರ್ಗೆ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ನಾನು ಗೆದ್ದಿz್ದÉÃನೆ. ಈ ಬಾರಿಯೂ ಅವರೇ ಉಸ್ತುವಾರಿ ಮಂತ್ರಿ. ಹೀಗಾಗಿ ನನ್ನ ಗೆಲುವು ಖಚಿತ. ಕಳೆದ ಬಾರಿ ಪಾಲಿಕೆ ಆಯುಕ್ತರಾಗಿದ್ದವರು ಈ ಸಲ ಡಿಸಿ. ನನ್ನ ಗೆಲುವಿಗೆ ಇದೂ ಒಂದು ಪ್ಲಸ್ ಪಾಯಿಂಟ್ ಎಂದು ಹೇಳಿದರು.
ಬಿಜೆಪಿ ಗ್ರಾಮೀಣ ಜಿ¯್ಲÁಧ್ಯP್ಷÀ ಶಿವರಾಜ ಪಾಟೀಲ್ ರz್ದÉÃವಾಡಗಿ, ಅಶೋಕ ಬಗಲಿ, ಸಂತೋಷ ಹಾದಿಮನಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net