ಆಶಾ ಕಾರ್ಯಕರ್ತೆಯರಿಗೆ ಅನುಕೂಲವಿಲ್ಲ

Shantha shekar
Published on

ಚಿತ್ರದುರ್ಗ: ಕಳೆದ 2009ರಲ್ಲಿ ಜಾರಿಗೊಳಿಸಿದ್ದ ಪ್ರೋತ್ಸಾಹಧನವೇ ಈಗಲೂ ಇದೆ. 15 ವರ್ಷದಲ್ಲಿ ಸಾಕಷ್ಟು ಬೆಲೆ ಏರಿಕೆ ಆಗಿದೆ. ಹೀಗಾಗಿ ಹೆಚ್ಚಿಸಿದ್ದರೆ ಅನುಕೂಲ ಆಗುತ್ತಿತ್ತು. ಆಯುಷ್ಮಾನ್ ಭಾರತ ಯೋಜನೆ ವ್ಯಾಪ್ತಿಯೊಳಗೆ ಮುಂಚಿನಿಂದಲೂ ಇದ್ದೇವೆ ಎಂದು ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ ಜಿಲ್ಲಾ ಕಾರ್ಯದರ್ಶಿ ಕೆ.ಶಾಂತಾ ಶೇಖರ್ ತಿಳಿಸಿದ್ದಾರೆ.

ಹೊಸದಾಗಿ ಏನಾದರೂ ಘೋಷಿಸುವ ಮೂಲಕ ಜೀವನಕ್ಕೆ ಭದ್ರತೆ ನೀಡಿದ್ದರೆ ಕೇಂದ್ರ ಸರ್ಕಾರಕ್ಕೆ ಆಭಾರಿಯಾಗಿ ಆಶಾ ಕಾರ್ಯಕರ್ತೆಯರು ಇರುತ್ತಿದ್ದರು. ಮುಂದಿನ ಬಜೆಟ್‌ನಲ್ಲಾದರೂ ಈ ಕುರಿತು ಗಮನಹರಿಸಲಿ ಎಂದು ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net